ನಾಪೆÇೀಕ್ಲು, ಡಿ. 6: ಬೇತು ಮತ್ತು ಪಾರಾಣೆ ಗ್ರಾಮಗಳ ಕಕ್ಕಬ್ಬೆ ಹೊಳೆಗೆ ನಿರ್ಮಿಸಲಾಗುತ್ತಿರುವ ಮಕ್ಕಿಕಡು ಸೇತುವೆ ಕಾಮಗಾರಿಯನ್ನು ಶಾಸಕ ಕೆ.ಜಿ. ಬೋಪಯ್ಯ ಪರಿಶೀಲಿಸಿದರು.

ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು 2011-12ನೇ ಸಾಲಿನಲ್ಲಿ ಹೇಮಾಮಾಲಿನಿ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಅವರ ನಿಧಿಯಿಂದ ಸೇತುವೆ ನಿರ್ಮಿಸಲು 20 ಲಕ್ಷ ರೂ. ಮಂಜೂರು ಮಾಡಲಾಗಿತ್ತು. ಕಾಮಗಾರಿಗೆ ಹಣದ ಕೊರತೆ ಉಂಟಾದ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ನಿಗಮದಿಂದ ಎರಡು ಬಾರಿ 5 ಲಕ್ಷ ರೂ. ಹಾಗೂ ಈಗ ಹೆಚ್ಚುವರಿಯಾಗಿ 5 ಲಕ್ಷ ರೂ. ಅನುದಾನದೊಂದಿಗೆ ಒಟ್ಟು 35 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವದು. ಉಳಿದ ತಡೆಗೋಡೆ ಕಾಮಗಾರಿಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವದು ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ತಾಲೂಕು ಪಂಚಾಯಿತಿ ¸ದÀಸ್ಯರಾದ ನೆರೆಯಂಡಮ್ಮಂಡ ಉಮಾ ಪ್ರಭು, ಕೋಡಿಯಂಡ ಇಂದಿರಾ ಹರೀಶ್, ಅಪ್ಪನೆರವಂಡ ರಾಜಾ, ಚಂಗಂಡ ಸೂರಜ್ ಮತ್ತಿತರರು ಇದ್ದರು.