ಆಲೂರು-ಸಿದ್ದಾಪುರ, ಒಡೆಯನಪುರ, ಡಿ. 5: ಶಿಕ್ಷಣದಿಂದ ಸಮಾಜವನ್ನು ಸಂಸ್ಕಾರಗೊಳಿಸಲು ಸಾಧ್ಯವಾಗುತ್ತದೆ ಎಂದು ಕುಶಾಲನಗರ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಉ.ರಾ. ನಾಗೇಶ್ ಅಭಿಪ್ರಾಯಪಟ್ಟರು.

ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆ, ಪ.ಪೂ. ಕಾಲೇಜು ಮತ್ತು ವಿಘ್ನೇಶ್ವರ ಗೋಲ್ಡನ್ ಸ್ಕೂಲಿನ 2017-18ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದಿನ ಕಾಲದಲ್ಲಿ ಶಿಕ್ಷಣದಲ್ಲಿ ಸಂಸ್ಕಾರ ಇರುತ್ತಿತ್ತು. ಇದರಿಂದ ಆಗÀ ಸಮಾಜವೂ ಸಂಸ್ಕಾರಗೊಂಡು ಜನರು ಸಂಸ್ಕಾರದೊಂದಿಗೆ ಜೀವನ ನಡೆಸುತ್ತಿದ್ದರು. ಆದರೆ ಈಗ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಗತಿಯಾಗುತ್ತಿರು ವದರ ಜೊತೆಯಲ್ಲಿ ಶಿಕ್ಷಣವೂ ಆಧುನಿಕಗೊಳುತ್ತಿದ್ದು, ಶಿಕ್ಷಣದಲ್ಲಿ ಸಂಸ್ಕಾರ ಇಲ್ಲದ ಕಾರಣದಿಂದ ಸಮಾಜ ಸ್ವಾಸ್ಥ್ಯವನ್ನು ಕಳೆದು ಕೊಳ್ಳುತ್ತಿದೆ. ಮಹಿಳೆಯರು ವಿದ್ಯಾವಂತರಾದರೆ ಸಂಸ್ಕಾರವಂತಿಕೆ ಇಲ್ಲದ ಸಮಾಜವನ್ನು ತಿದ್ದುವ ಮೂಲಕ ಸಮಾಜವನ್ನು ಅಭಿವೃದ್ಧಿ ಪಡಿಸಬಹುದಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೆ.ಇ. ಕೃಷ್ಣರಾಜು, ಶಿಕ್ಷಣ ಸಾರ್ವಜನಿಕರ ಸ್ವತ್ತು. ಇದನ್ನು ಸುಲಭವಾಗಿ ಸಂಪಾದನೆ ಮಾಡಲು ಸಾಧ್ಯವಿಲ್ಲ. ಕಠಿಣವಾದ ಶಿಕ್ಷಣವನ್ನು ಪಡೆದುಕೊಂಡರೆ ಮುಂದಿನ ಜೀವನಕ್ಕೆ ಶಿಕ್ಷಣ ದಾರಿದೀಪವಾಗುತ್ತದೆ ಎಂದರು.

ಜಿ.ಪಂ. ಸದಸ್ಯೆ ಸರೋಜಮ್ಮ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರೆ ಮುಂದಿನ ಭವಿಷ್ಯವೂ ಸಾಕಾರಗೊಳ್ಳುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ಶನಿವಾರಸಂತೆ ಸಿಆರ್‍ಪಿ ಹೆಚ್.ಎನ್. ನಿರ್ಮಲ ಮಾತ ನಾಡಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ರಮಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿ.ಎನ್. ಬೆಳ್ಳಿಯಪ್ಪ, ಎಸ್‍ಡಿಎಂಸಿ ಅಧ್ಯಕ್ಷೆ ಬಾನು ರಿಜ್ವಾನ್, ವಿದ್ಯಾಸಂಸ್ಥೆ ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ವಿದ್ಯಾಸಂಸ್ಥೆ ನಿರ್ದೇಶಕ ರಾದ ಗೋವಿಂದೇಗೌಡ, ಡಿ.ಜಿ. ನಿತ್ಯನಿಧಿ, ಯು.ಎನ್. ದೇವ ರಾಜ್, ಬಿ.ಬಿ. ಲೋಕೇಶ್, ಉಪನ್ಯಾ ಸಕರಾದ ಕೆ.ಪಿ. ಜಯ ಕುಮಾರ್, ಶರ್ಫರಾಜ್ ಅಹಮದ್, ಒ. ಅಂಜನಪ್ಪ ಇದ್ದರು. ವಿದ್ಯಾಸಂಸ್ಥೆಯ ವಾರ್ಷಿ ಕೋತ್ಸವದ ಅಂಗವಾಗಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.