ಮೂರ್ನಾಡು, ಡಿ. 5: ಬಲಮುರಿಯಿಂದ ವಾಟೆಕಾಡುವಿಗೆ ಸಾಗುವ ರಸ್ತೆ ಕೆಸರು ಮಯವಾಗಿದ್ದು, ಸ್ಥಳೀಯ ನಿವಾಸಿಗಳು ಕೆಸರು ಮಣ್ಣನ್ನು ರಸ್ತೆಯಿಂದ ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಲಮುರಿಯಿಂದ ವಾಟೆಕಾಡು, ಹೊದ್ದೂರು ಸಂಪರ್ಕ ರಸ್ತೆ ತೀರಾ ಗುಂಡಿಗಳಿಂದ ಕೂಡಿದ್ದು, ಈ ಹಿನ್ನೆಲೆ ಪಾಲೇಮಾಡುವಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ನೆಲ ಸಮತಟ್ಟುಗೊಳ್ಳಿಸುವ ಮಣ್ಣನ್ನು ತಂದು ಗುಂಡಿ ಬಿದ್ದ ರಸ್ತೆಗೆ ಕಳೆದ ನಾಲ್ಕು ದಿನಗಳ ಹಿಂದೆ ಸುರಿಯಲಾಯಿತು. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆಗೆ ರಸ್ತೆಯಲ್ಲಿ ತುಂಬಿಸಲಾದ ಮಣ್ಣು ವಾಹನಗಳ ಓಡಾಡದಿಂದ ಕೆಸರು ರಸ್ತೆಯಾಗಿ ಮಾರ್ಪಟ್ಟಿದೆ.

ಸ್ಥಳೀಯ ನಿವಾಸಿಗಳು ಶನಿವಾರ ರಸ್ತೆಯಲ್ಲಿ ಸುರಿಯಲಾದ ಮಣ್ಣನ್ನು ಹೊರತೆಗೆದು ವಾಹನಗಳ ಸಂಚಾರಕ್ಕೆ ಅನುವು ಮಾಡಿದರು.