ಮಡಿಕೇರಿ, ಡಿ. 4: ಕೊಡಗು ಜಿಲ್ಲಾ ಶಿಕ್ಷಕರ ಸಂಘದ ಸಭೆ ಇತ್ತೀಚೆಗೆ ನೆಲ್ಲಿಹುದಿಕೇರಿಯಲ್ಲಿರುವ ಅವಿನಾಶ್ ಎಂಬವರ ಮನೆಯಲ್ಲಿ ನಡೆಯಿತು.
ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುದ್ಯನ ಗೌರಮ್ಮ ಸೋಮಣ್ಣ, ಉಪಾಧ್ಯಕ್ಷರಾಗಿ ಜೋಸೆಫ್, ಕಾರ್ಯದರ್ಶಿಯಾಗಿ ಅವಿನಾಶ್, ಕ್ರೀಡಾ ಕಾರ್ಯದರ್ಶಿಯಾಗಿ ರಮಶೇಡ್, ಖಜಾಂಚಿಯಾಗಿ ಧೀರಜ್, ಸದಸ್ಯರುಗಳಾಗಿ ಕೆ.ಕೆ. ಶಂಕರನಾರಾಯಣ ಹೆಬ್ಬಾರ್, ಕೆ.ಪಿ. ಮುದ್ದಪ್ಪ, ನಾಚಪ್ಪ, ನಂಜಪ್ಪ, ಪ್ರವೀಣ್, ಬಿಂದಿಯ ಅವರನ್ನು ಆಯ್ಕೆ ಮಾಡಲಾಯಿತು.