ಸೋಮವಾರಪೇಟೆ,ಡಿ.5: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ.79ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸಿದರು.
ಶಾಸಕರ ನಿಧಿಯಿಂದ ರೂ.5ಲಕ್ಷ ವೆಚ್ಚದಲ್ಲಿ ದುರ್ಗಾ ಎಸ್ಟೇಟ್ ರಸ್ತೆ, ಕೊಡಗು ಪ್ಯಾಕೇಜ್ನಲ್ಲಿ ರೂ.18ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ರೂ.30ಲಕ್ಷ ವೆಚ್ಚದಲ್ಲಿ ಐಗೂರು-ಕಿರಗಂದೂರು ರಸ್ತೆ ಕಾಮಗಾರಿ, ಕಮ್ಮತಳ್ಳಿ ರಸ್ತೆಗೆ ರೂ.10ಲಕ್ಷ, ಪಾಷಾಣಮೂರ್ತಿ ದೇವಸ್ಥಾನ ರಸ್ತೆಗೆ ರೂ. 3ಲಕ್ಷ, ಶಾಸಕರ ನಿಧಿಯಲ್ಲಿ ನವೀನ್ ಮನೆ ರಸ್ತೆ ಕಾಮಗಾರಿಗೆ ರೂ. 5ಲಕ್ಷ, ಬಾಬು ಮನೆ ರಸ್ತೆ ಕಾಮಗಾರಿಗೆ ರೂ. 8ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಶಾಸಕರ ನಿಧಿ, ಲೋಕೋಪಯೋಗಿ ರಸ್ತೆ ಕೊಡಗು ಪ್ಯಾಕೇಜ್ನಡಿ ಗ್ರಾಮಾಂತರ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಕಾಮಗಾರಿ ಸಂದರ್ಭ ಖುದ್ದು ವೀಕ್ಷಣೆ ಮಾಡಿ ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಲು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ತಾಪಂ ಸದಸ್ಯೆ ಸಬಿತ ಚನ್ನಕೇಶವ, ಐಗೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಮಡಿಕೇರಿ ವಿಧಾನಸಭಾ ಕ್ಷೇತ್ರಿಯ ಸಮಿತಿ ಉಪಾಧ್ಯಕ್ಷ ಎಂ.ಎ. ಪ್ರಭಾಕರ್, ಪಕ್ಷದ ಮುಖಂಡರಾದ ಹೆಚ್.ಕೆ.ಮಾದಪ್ಪ, ಹರಗ ಉದಯ, ಚನ್ನಕೇಶವ, ಓ.ಆರ್.ಶಶಿ, ಐಗೂರು ಗ್ರಾಪಂ ಮಾಜಿ ಅಧ್ಯಕ್ಷ ಬಾರನ ಪ್ರಮೋದ್, ಗ್ರಾಪಂ ಸದಸ್ಯ ಗೋಪಾಲಕೃಷ್ಣ, ಸುಜಾತ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.