ಶ್ರೀಮಂಗಲ, ಡಿ. 5: ತಾವಳಗೇರಿ ಮೂಂದ್ನಾಡ್ ಕೋಲ್ಮಂದ್ನಲ್ಲಿ ನಾಡ್ ಕೋಲ್ ಇಂದು ಅಪರಾಹ್ನ 1.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ನಡೆಯಲಿದೆ.
ನಾಡ್ ತಕ್ಕ ಕೈಬಿಲೀರ ಹರೀಶ್ ಅಪ್ಪಯ್ಯ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಮುಂದಾಳತ್ವದಲ್ಲಿ ನಡೆಯುವ ನಾಡ್ ಕೋಲ್ ಮಂದ್ ನಮ್ಮೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಅಧಿಕಾರಿ ಬಿದ್ದಂಡ ಅಶೋಕ್ ಕುಮಾರ್ ಅವರನ್ನು ಸನ್ಮಾನಿಸಲಾಗುವದು.
ಈ ಸಂದರ್ಭ ಅಪರಾಹ್ನ 1.30 ಗಂಟೆಗೆ ಮಂದ್ಗೆ ಅಯ್ಯಪ್ಪ ಹಾಗೂ ಭದ್ರಕಾಳಿ ದೇವರ ಕುದುರೆ ಹತ್ತುವದು, ನಾಡಿನ ಜನರಿಂದ ಪುತ್ತರಿ ಕೋಲಾಟ್, ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕೋಲಾಟ್, ಕತ್ತಿಯಾಟ್, ಟಿ.ಶೆಟ್ಟಿಗೇರಿ ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಪಿಂಞ ಸಾಂಸ್ಕøತಿಕ ಸಂಸ್ಥೆಯ ಸದಸ್ಯರಿಂದ ಉಮ್ಮತ್ತಾಟ್, ವಾಲಗತಾಟ್, ಪರೆಯಕಳಿ, ತಾಳೇರಿ ಮೂಂದ್ ನಾಡ್ಗೆ ಒಳಪಟ್ಟ ಗ್ರಾಮಗಳ ಮಧ್ಯೆ ಪುರುಷ ಹಾಗೂ ಮಹಿಳೆಯರಿಗೆ ಪತ್ಯೇಕ ವಿಭಾಗದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ, ಬಹುಮಾನ ವಿತರಣೆ ಹಾಗೂ ಮಂದ್ ಪಿರಿವ ಕಾರ್ಯಕ್ರಮ ನಡೆಯಲಿದೆ.
ನಾಡಿನ ಸಮಸ್ಥರು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ಕೊಡವ ಪದ್ಧತಿ, ಸಂಸ್ಕøತಿ, ಹಬ್ಬ ಹರಿದಿನಗಳ ಹಿರಿಮೆಯನ್ನು ಉಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
* ನಾಪೋಕ್ಲುವಿನ ಬಿದ್ದಾಟಂಡ ವಾಡೆಯಲ್ಲಿಯೂ ಇಂದು ಹುತ್ತರಿ ಕೋಲಾಟ ನಡೆಯಲಿದೆ.
* ಮುಟ್ಲು ಬೊಟ್ಟಮಡ ಮಂದ್ನಲ್ಲಿ ಹುತ್ತರಿ ಕೋಲಾಟ ಜರುಗಲಿದೆ.