ಮಡಿಕೇರಿ, ಡಿ. 4: ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ತಾಲೂಕು ವ್ಯಾಪ್ತಿಗೆ ಒಳಪಟ್ಟ 5 ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು 17 ಸಹಾಯಕಿ ಹುದ್ದೆ ಖಾಲಿ ಇದ್ದು, ಈ ಖಾಲಿ ಹುದ್ದೆಗಳಿಗೆ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಗುರುತಿಸಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. 28 ಕೊನೆಯ ದಿನವಾಗಿದೆ. ಅಂಗನವಾಡಿ ಕೇಂದ್ರಗಳ ವಿವರ: ಕಾರ್ಯಕರ್ತೆ ಹುದ್ದೆಗೆ ಮರಂದೋಡ, ಕನ್ನಂಡಬಾಣೆ, ದೊಡ್ಡಪುಲಿಕೋಟು, ಅರಪಟ್ಟು, ಕ್ಲೋಸ್ ಬರ್ನ್ ಅಂಗನವಾಡಿ. ಆರ್ಮಿ ಕ್ಯಾಂಟೀನ್, ಮರಗೋಡು ಬಕ್ಕ, ವಣಚಲು, ಪೆರಾಜೆ ಗ್ರಾಮದ ಇಂದಿರಾ ಆವಾಜ್, ಎಂ. ಬಾಡಗ-2, ಹೊದವಾಡ-1, ಕೊಟ್ಟಮುಡಿ-2, ಕಾರುಗಂದ ಕಾಲೋನಿ, ಎಡಪಾಲ-1 ಕಿಕ್ಕರೆ, ಕಬ್ಬಿನಕಾಡು, ಬಾವಲಿ-1, ಬಿ. ಹೊದ್ದೂರು, ಕಕ್ಕಬೆ ಗ್ರಾಮದ ಅಮ್ಮಂಗೇರಿ, ಕೆ. ಬಾಡಗ ಗ್ರಾಮದ ಭಗವತಿ ನಗರ, ಬಾವಲಿ-2, ನಗರಸಭೆ ವ್ಯಾಪ್ತಿಯ ಬಾಣೆಮೊಟ್ಟೆ ಅಂಗನವಾಡಿಗಳಿಗೆ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.