*ಗೋಣಿಕೊಪ್ಪಲು, ಡಿ. 2: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಗ್ಯಾಸ್ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಂ.ಎನ್. ಸುಮಂತ್ ಅರಣ್ಯ ಇಲಾಖೆಯ ಮೀಸಲು ಅನುದಾನದಲ್ಲಿ 10 ಮಂದಿ ಫಲಾನುಭವಿಗಳಿಗೆ ಸಿಲಿಂಡರ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಅರಣ್ಯ ಉಳಿಸಲು ಸರಕಾರ ಕೈಗೊಂಡಿರುವ ಅಡುಗೆ ಅನಿಲ ವಿತರಣೆ ಅತ್ಯುಪಯುಕ್ತ ಯೋಜನೆಯಾಗಿದೆ. ಹೊಗೆ ಮುಕ್ತ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಸಿಲಿಂಡರ್ ಬಳಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಕೆ.ಎಸ್. ಯಶೋಧ, ಸದಸ್ಯರಾದ ಸಿ.ಕೆ. ಉದಯ್, ಸಿ.ಎನ್. ರಂಜು ಕರುಂಬಯ್ಯ, ಮೀನಾ, ಸಬಿತಾ, ದಮಯಂತಿ, ಎಂ.ಯು. ಸಂದೀಪ್, ಗೌರಿ, ಅಯ್ಯಪ್ಪ, ಚಂದ, ಸಿದ್ದ ಬಾಚೀರ, ಜಾನ್ಸಿ, ಪಿಡಿಓ ಕವಿತಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.