ಕುಶಾಲನಗರ, ಡಿ. 2: ಇಲ್ಲಿಗೆ ಸಮೀಪದ ಚಿಕ್ಕ ಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಉಪನ್ಯಾಸ ಕಾರ್ಯ ಕ್ರಮವನ್ನು ಆಯೋಜಿಸ ಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೂಡಿಗೆಯ ವಕೀಲ ಬಿ. ಮೋಹನ್ “ಕೌಟುಂಬಿಕ ದೌರ್ಜನ್ಯ ಕಾಯ್ದೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಪೋಲೀಸ್ ಅಧಿಕಾರಿ ಎಂ.ಡಿ. ಅಪ್ಪಾಜಿ “ಸಂಚಾರಿ ನಿಯಮ ಮತ್ತು ಕಾಯ್ದೆ”ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಜೆ.ಇ. ಮಹೇಶ್ “ಕಾನೂನು ಸುವ್ಯವಸ್ಥೆ ಮತ್ತು ಪೋಲಿಸರ ಜವಾಬ್ದಾರಿ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರುಗಳಾದ ಬಿ.ಎಸ್. ಮಮತ, ಹೆಚ್.ಎಸ್. ವೆಂಕಟೇಶ್ ಮತ್ತು ಸಿ.ಎಸ್. ತಾರಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಭಾರತಿ, ಮಹಿಳಾ ಉಸ್ತುವಾರಿ ಪೊಲೀಸ್ ತೇಜಸ್ವಿನಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೂಜಾ. ನಿರೂಪಿಸಿದರು, ಪ್ರಿಯಾ ಪ್ರಾರ್ಥಿಸಿ ದರು, ರಾಜ್ಯಶಾಸ್ತ್ರ ಸಂಘದ ಉಪಾಧ್ಯಕ್ಷ ಗಿರೀಶ್ ಸ್ವಾಗತಿಸಿ, ವಂದಿಸಿದರು.