ಮಡಿಕೇರಿ, ಡಿ. 1: ಇತ್ತೀಚೆಗೆ ಕುಶಾಲನಗರದ ಗುಡ್ಡೆಹೊಸೂರಿನಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕರ ಷಟಲ್ ಬ್ಯಾಡ್‍ಮಿಂಟನ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿ ಗಳಾದ ಎಂ.ಜಿ. ಅಯ್ಯಪ್ಪ, ಆಕರ್ಷ್ ಕೊಂಗಂಡ ಡಬ್ಬಲ್ಸ್‍ನಲ್ಲಿ ಹಾಗೂ ಸಿಂಗಲ್ಸ್‍ನಲ್ಲಿ ಎಂ.ಜಿ. ಅಯ್ಯಪ್ಪ ಪ್ರಥಮ ಸ್ಥಾನಗಳಿಸಿದ್ದಾನೆ. ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್‍ನಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕಿಯರ ಪಂದ್ಯಾವಳಿಯಲ್ಲಿ ಕೆ.ಪಿ. ಚೋಂದಮ್ಮ, ಗಾಯನ ಬೋಪಣ್ಣ, ಗಾನವಿ ಬೋಪಣ್ಣ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
ಪ್ರಾಶುಂಪಾಲ ವಿನೋದ್ ಪಿ.ಎನ್, ಉಪ ಮುಖ್ಯ ಶಿಕ್ಷಕಿ ಸೌಮ್ಯ ಜಿ.ವಿ. ಹಾಗೂ ದೈಹಿಕ ಶಿಕ್ಷಕ ಕೆ.ಜಿ. ಮಿಥುನ್ ಹಾಜರಿದ್ದರು.