ಸುಂಟಿಕೊಪ್ಪ: ಇಲ್ಲಿನ ಮದುರಮ್ಮ ಬಡಾವಣೆಯಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ 26ನೇ ವರ್ಷದ ನಾಗದೇವರ ಪೂಜೋತ್ಸವ ಮತ್ತು ನಾಗಪ್ರತಿಷ್ಠೆ ಮತ್ತು ಕಲಶ ಸ್ಥಾಪನೆ ನೆರವೇರಿತು.

ಸಂಜೆ ದೇವಾಲಯದ ಆವರಣದಲ್ಲಿ ವಾಸ್ತುಪೂಜೆ ಮಾಡಿ ನಂತರ ಶುದ್ಧಿ ಮಾಡಲಾಯಿತು. ಮಾರನೇ ದಿನ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾಗಿ ವಿವಿಧ ಧಾರ್ಮಿಕ ವಿಧಾನಗಳನ್ನು ಹಿರಿಯ ಅರ್ಚಕ ಹಾ.ಮಾ. ಗಣೇಶ್ ಶರ್ಮಾ ನೆರವೇರಿಸಿದರು. ನಂತರ ಧನುರ್ ಲಗ್ನದಲ್ಲಿ ನಾಗಪ್ರತಿಷ್ಠೆ ಮತ್ತು ಕಲಶ ಸ್ಥಾಪನೆ ನೆರವೇರಿಸಲಾಯಿತು. ಷಷ್ಠಿ ಪ್ರಯುಕ್ತ ಅನ್ನದಾನ ನೆರವೇರಿಸಲಾಯಿತು.