ಸೋಮವಾರಪೇಟೆ, ನ. 30: ಮಕ್ಕಳಿಗೆ ತಮ್ಮದೇ ಆದ ಅಭಿರುಚಿ, ಆಸಕ್ತಿ, ಸ್ವಾತಂತ್ರ್ಯವಿದ್ದು, ಅವರ ಅಭಿರುಚಿಗೆ ತಕ್ಕಂತೆ ಅವಕಾಶಗಳನ್ನು ಒದಗಿಸಬೇಕು ಎಂದು ಹಿರಿಯ ಸಾಹಿತಿ ಹಾಗೂ ಅಂಕಣಕಾರ ಆನಂದತೀರ್ಥ ಭಾರಧ್ವಜ್ ಅಭಿಪ್ರಾಯಪಟ್ಟರು.
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಚೆನ್ನಬಸಪ್ಪ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಶಾಲೆಗಳು ವಿದ್ಯಾ ಕೇಂದ್ರದ ಬದಲು ವ್ಯವಹಾರ ಕೇಂದ್ರಗ ಳಾಗಿವೆ. ಪರೀಕ್ಷೆಗೆ ಮಕ್ಕಳೆಂಬ ಸ್ಪರ್ಧಿ ಗಳನ್ನು ಸಿದ್ಧಗೊಳಿಸುವ ಕಾರ್ಖಾನೆ ಯಾಗಿದೆ. ವಿದ್ಯಾರ್ಥಿಗಳು ಕೂಡ ಒತ್ತಡದ ಬದುಕನ್ನು ಸಾಗಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಶಾಲೆ ಮತ್ತು ಪೋಷಕರ ಮೇಲೆ ಅಸಹನೆ, ಆಕ್ರೋಶ, ನಿರಾಸಕ್ತಿ ಮೂಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಎಸ್.ಸಿ. ರಾಜ ಶೇಖರ್ ಮಾತನಾಡಿ, ಭಾಷೆ ಪ್ರತಿಯೊಬ್ಬ ರಿಗೂ ಅಗತ್ಯ. ಮಾತೃ ಭಾಷೆಯನ್ನು ಬಿಟ್ಟು ಬದುಕುವದು ಅಸಾಧ್ಯ. ಕನ್ನಡ ನಾಡು, ನುಡಿ, ಜಲದ ರಕ್ಷಣೆಯತ್ತ ಗಮನಹರಿಸಬೇಕು. ಭಾಷೆ ಮತ್ತು ಗಡಿಯ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಶಾಲ ವಹಿಸಿದ್ದರು. ವೇದಿಕೆಂiÀiಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಪದವೀಧರ ಮುಖ್ಯ ಶಿಕ್ಷಕರಾದ ಎಂ.ಜಿ. ಅಣ್ಣಮ್ಮ, ಸಿಆರ್‍ಪಿ ಜವರಯ್ಯ, ತೀರ್ಪುಗಾರರಾದ ನ.ಲ. ವಿಜಯ, ಪ್ರೇಮ, ಆಶಾ, ರುಬೀನಾ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.