ಮಡಿಕೇರಿ, ನ. 30: ಕೊಡಗು ಜಿಲ್ಲೆಯ ಅಂಗವಾಡಿ ಕೇಂದ್ರಗಳ ಮುಖಾಂತರ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆಯ ಪೌಷ್ಟಿಕ ಆಹಾರ ಧಾನ್ಯಗಳನ್ನು ಪೂರೈಸುವಲ್ಲಿ ದೋಷಾರೋಪಣೆಯೊಂದಿಗೆ ಅಸಮಾಧಾನ ಮುಂದುವರಿ ಯುವಂತಾಗಿದೆ.
ವರ್ಷದಿಂದ ವರ್ಷಕ್ಕೆ ಪೌಷ್ಟಿಕ ಆಹಾರ ಪೂರೈಕೆ ಪಾರದರ್ಶಕ ಗೊಳಿಸುವ ದಿಸೆಯಲ್ಲಿ ಟೆಂಡರ್ ಪ್ರಕ್ರಿಯೆ ಕೂಡ ನಡೆಯದೆ. ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿ ರುವದು ಒಂದೆಡೆಯಾದರೆ, ಕೊಡಗು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಸಹಕಾರ ಸಂಸ್ಥೆ ಜನತಾ ಬಜಾರ್‍ನಿಂದ ಆಹಾರ ಖರೀದಿಸಲು ಸೂಚಿಸಿದ್ದರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಬಾರ ಉಪನಿರ್ದೇಶಕರೇ ಜನತಾ ಬಜಾರ್ ವಿರುದ್ಧ ಕಳಪೆ ಆಹಾರ ಪೂರೈಕೆ ಆರೋಪ ಹೊರಿಸಿರುವದು ಸಾಕಷ್ಟು ಸಂಶಯಕ್ಕೆ ಎಡೆಮಾಡಿದಂತಾಗಿದೆ.
ಒಂದೆಡೆ ಜನತಾ ಬಜಾರ್ ಆಡಳಿತ ಮಂಡಳಿ ಹಾಗೂ ಇಲಾಖೆಯ ಪ್ರಬಾರ ಅಧಿಕಾರಿ ನಡುವಿನ ಅಂತಃಕಲಹದಿಂದ ‘‘ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯಿತು’’ ಎಂಬಂತೆ ಅಂಗನವಾಡಿಗಳ ಮುಗ್ದ ಮಕ್ಕಳು, ಗ್ರಾಮೀಣ ಭಾಗದ ಬಡ ಕಿಶೋರಿಯರು, ಬಾಣಂತಿಯರು, ಗರ್ಭಿಣಿಯರು ಸಮರ್ಪಕ ಪೌಷ್ಟಿಕ ಆಹಾರ ಸಕಾಲದಲ್ಲಿ ಲಭಿಸದೆ ಶೋಷಣೆಗೆ ಒಳಗಾಗುತ್ತಿರುವ ಆರೋಪವಿದೆ. ಇತ್ತ ಜಿಲ್ಲಾಡಳಿತ ದೊಂದಿಗೆ ಜನಪ್ರತಿನಿಧಿಗಳು ಗಂಭೀರ ಪರಿಗಣಿಸಿ ಸರಕಾರದ ಯೋಜನೆ ಫಲಾನುಭವಿಗಳನ್ನು ತಲಪುವತ್ತ ಕಾಳಜಿ ತೋರಬೇಕಿದೆ.
ಮಹಿಳಾ ಒಕ್ಕೂಟದ ವೇದಿಕೆ
ಎಂಎಸ್‍ಪಿಸಿಯ ಜಿಲ್ಲಾಧಕ್ಷೆÀ ಮಣಿ ಲೋಕೇಶ್ ಹಾಗೂ ಕಾರ್ಯದರ್ಶಿ ಮೋಹನಾಕ್ಷಿ ಮಾತನಾಡಿ, ಜನತಾ ಬಜಾóರ್ ಈ ಹಿಂದೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದಕ್ಕಾಗಿ ಹಾಸನ ಮತ್ತು ಮೈಸೂರು ಭಾಗದಿಂದ ಸಾಮಗ್ರಿಗಳನ್ನು ಖರೀದಿಸ ಬೇಕಾಯಿತೆಂದು ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಪ್ರತಿ ತಿಂಗಳು ರೂ. 12 ಲಕ್ಷ ಮೊತ್ತದ ಆಹಾರ ಸಾಮಗ್ರಿಯನ್ನು ಖರೀದಿಸಲಾಗುತ್ತಿದೆ. ಆದರೆ, ಯಾವದೇ ಟೆಂಡರ್ ಪ್ರಕ್ರಿಯೆ ನಡೆಸುತ್ತಿಲ್ಲ. ಮುಂದಿನ ದಿನಗಳಲ್ಲಿ ಟೆಂಡರ್ ಕರೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಎ.ಬಿ. ಕವಿತಾ, ಖಜಾಂಚಿ ಎಂಎಸ್. ರೆಜಿನಿ ಹಾಗೂ ಎಂಎಸ್‍ಪಿಸಿಯ ಖಜಾಂಚಿ ಶಾಂತಾ ಸುರೇಶ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರೆಹನಾ ಫಿರೋಜ್ó ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಾಮಾಣಿಕರಾಗಿದ್ದು, ಜನತಾ ಬಜಾóರ್‍ನಿಂದ ಆಹಾರ ಖರೀದಿಸಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವದು ಮಹಿಳಾ ಅಧಿಕಾರಿಗೆ ಮಾಡುತ್ತಿರುವ ಅಪಮಾನವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜನತಾ ಬಜಾóರ್ ಆಡಳಿತ ಮಂಡಳಿಯಿಂದ ಇದೇ ರೀತಿಯ ವರ್ತನೆ ಮುಂದುವರಿದಲ್ಲಿ ಒಕ್ಕೂಟದ ವತಿಯಿಂದ ತೀವ್ರ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂಗನವಾಡಿ ನೌಕರರ ಅಸಮಾಧಾನ
ಜಿಲ್ಲೆಯ ಯೋಜನೆಗಳಲ್ಲಿ ಇರುವ ಅಂಗನವಾಡಿ ಕೇಂದ್ರಗಳು ಹಾಗೂ ಕಾರ್ಯಕರ್ತೆಯರಲ್ಲಿ ಇರುವ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ಜಿಲ್ಲಾಮಟ್ಟದ ಮತ್ತು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಫಲರಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ಕುಂದುಕೊರತೆ ಸಭೆಯಲ್ಲಿ ಕಾರ್ಯಕರ್ತೆಯರ ಹಾಗೂ ಸಿಬ್ಬಂದಿಗಳ ಮತ್ತು ಕೇಂದ್ರಗಳ ಸಮಸ್ಯೆಯನ್ನು ಹೇಳಿಕೊಂಡರೂ ಸಹ ಉಪನಿರ್ದೇಶಕರು ಈವರೆಗೆ ಬಗೆಹರಿಸಿಲ್ಲ ಎಂದು ಸೋಮವಾರ ಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
2017-18ನೇ ಸಾಲಿನಲ್ಲಿ ಈಗಾಗಲೇ 10 ತಿಂಗಳು ಕಳೆದರೂ, 8 ತಿಂಗಳು ಮಾತ್ರ ಆಹಾರ ಸಾಮಗ್ರಿ ಸರಬರಾಜಾಗಿದೆ. ಉಳಿದ 2 ತಿಂಗಳ ಆಹಾರವನ್ನು ಮಕ್ಕಳಿಗೆ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಸೂಕ್ತ ಜಿಲ್ಲಾಮಟ್ಟದ ಅಧಿಕಾರಿಗಳ ಅವಶ್ಯಕತೆ ಇದೆ. ಆದರೆ ಸಿ ದÀರ್ಜೆಯ ನೌಕರರು ಜಿಲ್ಲಾಮಟ್ಟದ ಪ್ರಬಾರವನ್ನು ನಿರ್ವಹಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಗುವದಿಲ್ಲ.
ಆದ್ದರಿಂದ ಜಿಲ್ಲೆಯ ಉಪನಿರ್ದೇಶಕರ ಹುದ್ದೆಗೆ ಸಮಾನಾಂತರ ಹುದ್ದೆಯನ್ನು ಹೊಂದಿರುವ ಪುರುಷ ಅಧಿಕಾರಿ ಯನ್ನು ಪ್ರಬಾರದಲ್ಲಿರಿಸಲು ಕೇಳಿಕೊಳ್ಳ ಲಾಗಿದೆ. ಈ ರೀತಿ ಮಾಡಿದರೆ ಹಾಲಿ ಇರುವ ಮತ್ತು ಮುಂದೆ ಬರುವ ಸಮಸ್ಯಗಳಿಗೆ ಅಂತ್ಯ ಹಾಡಿದಂತೆ ಆಗುತ್ತದೆ ಎಂದು ತಾಲೂಕು ಪದಾಧಿಕಾರಿಗಳಾದ ಎಸ್.ಎನ್. ಸವಿತಾ ಹಾಗೂ ಭಾಗೀರಥಿ ತಿಳಿಸಿದ್ದಾರೆ.
ಜನತಾ ಬಜಾರ್ ಅಧ್ಯಕ್ಷರ ಪ್ರತಿಕ್ರಿಯೆ
ಲೋಕಾಯುಕ್ತ ತನಿಖೆಗೆ ಜನತಾ ಬಜಾರ್ ಅಧ್ಯಕ್ಷರ ಆಗ್ರಹದ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಸ್ತುವಾರಿ ಉಪನಿರ್ದೇಶಕರು ಪ್ರತಿಕ್ರಿಯೆ ನೀಡಿರುವ ಬಗ್ಗೆ ಜನತಾ ಬಜಾರ್ ಅಧ್ಯಕ್ಷರು ಮರು ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಲಯದ ಆದೇಶದಲ್ಲಿ 13.12.2006ರ ಪ್ರಕಾರ ಎಂ.ಎಸ್.ಪಿ.ಟಿ.ಸಿ. ಘಟಕದ ಮಹಿಳೆಯರು ಬಿ.ಪಿ.ಎಲ್. ಕಾರ್ಡು ದಾರರಾಗಿದ್ದು, ಕಡುಬಡವ ರಾಗಿದ್ದು ಮಹಿಳಾ ಸಬಲೀಕರಣದ ದೃಷ್ಟಿಯಿಂದ ಅಂಗನವಾಡಿಗಳಿಗೆ ಸರಬರಾಜು ಮಾಡುವ ಸಾಮಗ್ರಿಗಳನ್ನು ಕ್ಲಿನಿಂಗ್, ಪ್ಯಾಕಿಂಗ್ ಮತ್ತು ಸಾಗಾಟ ಮಾಡಲು ಶೇ. 20 ಕಮೀಷನ್ ನೀಡಲಾಗಿದೆ. ಆದರೆ ಅವರು ಸ್ವತಃ ಸಾಮಗ್ರಿ ಖರೀದಿಸಲು ಹಣದ ಕೊರತೆ ಇದೆ. ಕಡಿಮೆ ಪಕ್ಷ ತಿಂಗಳಿಗೆ 50 ಲಕ್ಷದಷ್ಟು ಹಣ ಬೇಕಾಗಬಹುದು.
ಈ ಹಣವನ್ನು ಸಂಬಂಧಪಟ್ಟ ಮಹಿಳಾ ಘಟಕದವರು ಎಲ್ಲಿಂದ ತರಲು ಸಾಧ್ಯ? ಸಂಬಂಧಪಟ್ಟ ಉಪನಿರ್ದೇಶಕರ ವಿತ್ತಂಡವಾದದಿಂದ ಎಂ.ಎಸ್.ಪಿ.ಟಿ.ಸಿ. ಕೂಡ್ಲೂರು ಮತ್ತು ಜಿಲ್ಲೆಯ ಇತರ ಘಟಕಗಳು 88 ಲಕ್ಷ ರೂಪಾಯಿ ಮತ್ತು ಅಕ್ಕಿ, ಗೋಧಿ, ಕಾಳು ಇಂತಹ ಲಕ್ಷಾಂತರ ರೂಪಾಯಿ ಹಗರಣವು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ತನಿಖೆಯಿಂದ ಬಯಲಾಗಿದೆ. ಇಷ್ಟು ದೊಡ್ಡ ಹಗರಣಕ್ಕೆ ಸಂಬಂಧಪಟ್ಟ ಅಧಿಕಾರಿಯ ತಪ್ಪು ಉತ್ತೇಜನವೇ ಕಾರಣ. ಹಗರಣಕ್ಕೆ ಸದರಿ ಅಧಿಕಾರಿಯೇ ನೇರ ಹೊಣೆಯಾಗಿ ತಕ್ಕ ಕ್ರಮಕ್ಕೆ ಆಗ್ರಹಿಸಲಾಗುವದು ಎಂದು ಜನತಾ ಬಜಾರ್ ಅಧ್ಯಕ್ಷ ರವಿ ಬಸಪ್ಪ ಪ್ರತಿಕ್ರಿಯಿಸಿದ್ದಾರೆ.
ಜನವರಿ 2017ರಿಂದ ಈಚೆಗೆ ಮೇಲ್ವಿಚಾರಣಾ ಸಭೆ ನಡೆಸದೆ ಸಾಮಗ್ರಿಗಳ ಬೆಲೆ ಇಳಿಕೆಯಾದರು ಬೆಲೆ ಪರೀಕ್ಷಣೆ ಗೋಜಿಗೆ ಹೋಗದೆ ಅಂದಿನ ಬೆಲೆ ಕೆ.ಜಿ.ಗೆ 20, 30 ರೂಪಾಯಿ ವ್ಯತ್ಯಾಸವಿದ್ದರೂ, ಅದೇ ಬೆಲೆಯಲ್ಲಿ ವ್ಯವಹಾರ ಮಾಡಿರುವದು ಬೆಳಕಿಗೆ ಬಂದಿರುವದು ಮತ್ತು ಯಾವದೇ ತೆರಿಗೆ ಪಾವತಿಮಾಡದೆ ಸರಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವದು ಮೇಲ್ನೋಟಕ್ಕೆ ಕಂಡು ಬರುವದು. ಇದಕ್ಕೆಲ್ಲಾ ಸದರಿ ಅಧಿಕಾರಿಯೇ ನೇರ ಹೊಣೆ. ಈ ಬಗ್ಗೆ ತನಿಖೆಯಾಗ ಬೇಕೆಂದು ಒತ್ತಾಯಿಸಲಾಗುವದು.
ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿಗಳ ಯಾವದೇ ಆದೇಶವಿಲ್ಲದೆ ‘ಸಿ’ ದರ್ಜೆಯ ಸಿಬ್ಬಂದಿಯನ್ನು ‘ಎ’ ದರ್ಜೆಯ ಅಧಿಕಾರಿಯ ಹುದ್ದೆಗೆ ನೇಮಕ ಮಾಡಿದ್ದಾರೆ.
ಸಂಬಂಧಪಟ್ಟ ಇಲಾಖೆಯ ಕಾರ್ಯವೈಖರಿ ಹೇಗಿರಬಹುದೆಂದು ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ರವಿ ಬಸಪ್ಪ ಒತ್ತಾಯಿಸಿದ್ದಾರೆ.