ಗೋಣಿಕೊಪ್ಪ ವರದಿ, ನ. 29: ಬುಧವಾರ ಆರಂಭಗೊಂಡ ಟೂರ್ನಿ ಯಲ್ಲಿ ಬಾಲಕರ 14, ಬಾಲಕಿಯರ 5 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ. ಬುಧವಾರ ನಡೆದ ಪಂದ್ಯಗಳಲ್ಲಿ ಗೋಣಿಕೊಪ್ಪ ಲಯನ್ಸ್, ಸೆಂಟ್ ಆನ್ಸ್, ಪೊನ್ನಂಪೇಟೆ ಸೆಂಟ್ ಆಂಥೋನಿ, ಲಯನ್ಸ್ (ಎ) ತಂಡ ಹಾಗೂ ರೂಟ್ಸ್ ತಂಡಗಳು ಗೆಲುವು ದಾಖಲಿಸಿದವು. ಗೋಣಿಕೊಪ್ಪ ಲಯನ್ಸ್ ತಂಡವು 5-0 ಗೋಲು ಗಳಿಂದ ಗುಡ್ ಶೆಫರ್ಡ್ ತಂಡವನ್ನು ಮಣಿಸಿತು. ಲಯನ್ಸ್ ಪರ 1 ರಲ್ಲಿ ರಜತ್, 2 ರಲ್ಲಿ ಸಪನ್, 3 ರಲ್ಲಿ ಶನತ್, 10 ರಲ್ಲಿ ಚರಣ್, 13 ರಲ್ಲಿ ದಿವನ್ ಗೋಲು ಹೊಡೆದರು. ಸೆಂಟ್ ಆನ್ಸ್ ತಂಡವು ಎಸ್‍ಎಂಎಸ್ ತಂಡದ ವಿರುದ್ಧ 1-0 ಗೋಲುಗಳಿಂದ ಗೆಲುವು ಪಡೆಯಿತು. 28 ನೇ ನಿಮಿಷದಲ್ಲಿ ಸುಬ್ರಮಣಿ 1 ಗೋಲು ಹೊಡೆದರು.

ಪೊನ್ನಂಫೇಟೆ ಸೆಂಟ್ ಆಂಥೋನಿ ತಂಡ ವೀರಾಜಪೇಟೆ ಪ್ರಗತಿ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಗೆಲುವು ಪಡೆಯಿತು. ವಿಜೇತ ತಂಡದ ಪರ 2 ರಲ್ಲಿ ತಿಮ್ಮಯ್ಯ, 19 ರಲ್ಲಿ ಕುಶಾಲಪ್ಪ, 21 ರಲ್ಲಿ ದಿವಿನ್, 23 ರಲ್ಲಿ ಬಿಪಿನ್ ತಲಾ ಒಂದೊಂದು ಗೋಲು ಬಾರಿಸಿದರು. ವೀರಾಜಪೇಟೆ ರೋಟರಿ ಗೈರಿನಿಂದಾಗಿ ಲಯನ್ಸ್ (ಎ) ತಂಡ, ಅಪ್ಪಚ್ಚಕವಿ ಗೈರಿನಿಂದಾಗಿ ರೂಟ್ಸ್ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆದವು.

ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಮಂಡೇಪಂಡ ಸುಬ್ರಮಣಿ ಮೆಮೋರಿಯಲ್ 14 ವರ್ಷದೊಳಗಿನ ಬಾಲಕ, ಬಾಲಕಿಯರ ಹಾಕಿ ಟೂರ್ನಿಗೆ ಹಾಕಿಕೂರ್ಗ್ ಕಾರ್ಯದರ್ಶಿ ಪಳಂಗಂಡ ಲವಕುಮಾರ್. ಚಾಲನೆ ನೀಡಿದರು. ಈ ಸಂದರ್ಭ ಹಾಕಿಕೂರ್ಗ್ ಖಜಾಂಚಿ ಐನಂಡ ಲಲಾ ಅಯ್ಯಣ್ಣ, ಜಿ ಪಂ. ಸದಸ್ಯ ಸಿ. ಕೆ. ಬೋಪಣ್ಣ, ದಾನಿ ಚೆರಿಯಂಡ ರಮೇಶ್ ಉಪಸ್ಥಿತರಿದ್ದರು.