ಸುಂಟಿಕೊಪ್ಪ, ನ. 30: ಪ್ರಪಂಚದಲ್ಲಿ ಬಡತನ ದೊಡ್ಡ ಸವಾಲಾಗಿದ್ದು, ಆದರಲ್ಲೂ ಪ್ರತಿ 16 ಸೆಕೆಂಡಿನಲ್ಲಿ ಒಬ್ಬರು ಹಸಿವಿನಿಂದ ಸಾವಿಗೀಡಾಗುತ್ತಾರೆ. ಲಯನ್ಸ್ ಸಂಸ್ಥೆ ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಲಯನ್ಸ್ ವಲಯ ಅಧ್ಯಕ್ಷೆ ರತ್ನಾ ಚರ್ಮಣ ಹೇಳಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದಲ್ಲಿ ಸುಂಟಿಕೊಪ್ಪ ಲಯನ್ಸ್ ಕ್ಲಬ್‍ನಲ್ಲಿ ಅಧಿಕಾರಿ ಭೇಟಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ದೇಶದ ಆಹಾರ ಕೊರತೆ ಕಾಡುತ್ತಿದೆ ಹಸಿರು ಕ್ರಾಂತಿಯ ಅಗತ್ಯತೆ ಇದೆ. ಪ್ರತಿಯೊಬ್ಬರೂ ಸಮಾಜಕ್ಕೆ ತನ್ನಿಂದಾಗುವ ಕೊಡುಗೆ ನೀಡಬೇಕಾಗಿದೆ.
ಹಸಿವಿನಿಂದ ಒಳಪಡುತ್ತಿರುವ ಕುಟುಂಬದ 1 ಮಗುವಿಗೆ ಲಯನ್ಸ್ ಸದಸ್ಯರುಗಳು ರೂ. 750 ಸಹಾಯ ಹಸ್ತ ನೀಡುವ ಮೂಲಕ ಹಸಿವು ಮುಕ್ತ ಸಮಾಜಕ್ಕೆ ಅವಕಾಶ ಒದಗಿಸಿ ಕೊಡಬೇಕು. ಪ್ರಪಂಚದಲ್ಲಿ ಅನೇಕ ಬದಲಾವಣೆಗಳಾಗುತ್ತಿದ್ದು, ಬದಲಾವಣೆಗೆ ತಕ್ಕದಾಗಿ ಯುವ ಜನತೆ ಪ್ರಗತಿಯತ್ತ ಸಾಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭ ಸಂತ ಅಂತೋಣಿ ಶಾಲೆಗೆ ಲಯನ್ಸ್ ಸಂಸ್ಥೆಯಿಂದ ಉಚಿತವಾಗಿ ಧ್ವನಿ ವರ್ಧಕವನ್ನು ನೀಡಲಾಯಿತು.
ಲಯನ್ಸ್‍ನಿಂದ ಶಾಲೆಗಳಲ್ಲಿ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಬೇಕೆಂದು ಲ|| ರತ್ನಾ ಚರ್ಮಣ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷರಾದ ಸಿ.ಕೆ.ರಕ್ಷಿತ್ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಶಶಿಕಾಂತ್, ಖಜಾಂಚಿ ಕೆ.ಪಿ. ಜಗನ್ನಾಥ್, ಕನ್ನಿಕಾ ರಕ್ಷಿತ್ ಉಪಸ್ಥಿತರಿದ್ದರು.
ಮೊದಲಿಗೆ ವಿಜಯ¯ಕ್ಷ್ಮೀ ಶ್ರೀನಿವಾಸ್ ಪ್ರಾರ್ಥಿಸಿ, ಸಿ.ಕೆ.ರಕ್ಷಿತ್ ಸ್ವಾಗತಿಸಿ, ಶಶಿಕಾಂತ್ ವರದಿ ವಾಚಿಸಿ, ವಂದಿಸಿದರು.