ಭಾಗಮಂಡಲ, ನ. 28: ಇಲ್ಲಿಗೆ ಸಮೀಪದ ತಾವೂರು ಗ್ರಾಮದ ಶ್ರೀ ಕಾವೇರಿ ಕಾಲೇಜು ಮೈದಾನದಲ್ಲಿ ರಾಯಲ್ ಸ್ಟೈಕರ್ಸ್ ತಾವೂರು ಇವರ ಸಹಯೋಗದಲ್ಲಿ ನಡೆದ ಅಂತರ್ ಜಿಲ್ಲಾಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ 30 ತಂಡಗಳು ಭಾಗವಹಿಸಿ ಅಂತಿಮವಾಗಿ ಎಸ್‍ಬಿಸಿಸಿ ಮೂರ್ನಾಡು ಮತ್ತು ಟೀಮ್ ಮ್ಯಾಕ್ಸ್‍ವೆಲ್ ತಂಡಗಳ ನಡುವೆ ಫೈನಲ್ ಪಂದ್ಯಾಟ ನಡೆದು ರೋಚಕವಾದ ಈ ಪಂದ್ಯಾಟದಲ್ಲಿ ಎಸ್‍ಬಿಸಿಸಿ ತಂಡ ಪ್ರಥಮ ಹಾಗೂ ಟೀಮ್ ಮ್ಯಾಕ್ಸ್‍ವೆಲ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿನ್ನರ್ ತಂಡಕ್ಕೆ ಠಾಣಾಧಿಕಾರಿ ಸದಾಶಿವ ಅವರು ಟ್ರೋಫಿ ಹಾಗೂ ನಗದನ್ನು ಹಾಗೂ ದ್ವಿತೀಯ ಸ್ಥಾನವನ್ನು ಪಂಚಾಯಿತಿ ಸದಸ್ಯ ಪುರುಷೋತ್ತಮ್ ಅವರು ಟ್ರೋಫಿಯನ್ನು ವಿತರಿಸಿದರು. ಸರಣಿ ಪುರುಷೋತ್ತಮನಾಗಿ ಟೀಮ್ ಮ್ಯಾಕ್ಸ್‍ವೆಲ್ ತಂಡದ ಸಂತೋಷ್ ಹಾಗೂ ಪಂದ್ಯ ಪುರುಷೋತ್ತಮನಾಗಿ ಎಸ್‍ಬಿಸಿಸಿ ಮೂರ್ನಾಡು ತಂಡದ ನಾಯಕ ಶಿವು ಪಡೆದುಕೊಂಡರು. ಸೌಹಾರ್ದಯುತವಾದ ಈ ಪಂದ್ಯಾಟಕ್ಕೆ ಕ್ರೀಡಾಭಿಮಾನಿಗಳು ಹಾಗೂ ಅನೇಕ ಗಣ್ಯರು ಸಾಕ್ಷಿಯಾದರು.