ಶ್ರೀಮಂಗಲ, ನ. 23: ಪೊನ್ನಂಪೇಟೆಯಲ್ಲಿ ಕಳೆದ 22 ದಿನಗಳಿಂದ ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಪೊನ್ನಂಪೇಟೆಯ ಗಾಂಧಿ ಪ್ರತಿಮೆಯ ಎದುರು ನಡೆಸುತ್ತಿರುವ ಪ್ರತಿಭಟನೆಗೆ ಗುರುವಾರ ಚೇಂಬರ್ ಆಫ್ ಕಾರ್ಮಸ್, ಗೋಣಿಕೊಪ್ಪ ಮಚೆರ್Éಂಟ್ ಕೋ-ಅಪರೇಟಿವ್ ಬ್ಯಾಂಕ್‍ನ ಆಡಳಿತ ಮಂಡಳಿ ಹಾಗೂ ಸದಸ್ಯರು ಬೆಂಬಲ ನೀಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ಈ ಸಂದರ್ಭ ಮಾತನಾಡಿದ ಗೋಣಿಕೊಪ್ಪ ಛೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಅವರು ದ.ಕೊಡಗಿನಲ್ಲಿ ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಅವಳಿ ನಗರವಾಗಿ ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಸಾಕಷ್ಟು ವರ್ತಕರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಜಿಎಸ್‍ಟಿ ತೆರಿಗೆ ಬಂದ ಮೇಲೆ ಅನ್‍ಲೈನ್‍ನಲ್ಲಿ ವ್ಯವಹಾರ ನಡೆಸುತ್ತಿದ್ದರೂ ಬಹಳಷ್ಟು ಸಣ್ಣ ಪುಟ್ಟ ವ್ಯವಹಾರದ ಮಾರಾಟ ತೆರಿಗೆಯನ್ನು ಪ್ರಸ್ತುತ ತಾಲ್ಲೂಕು ಕೇಂದ್ರ ವೀರಾಜಪೇಟೆಗೆ ತೆರಳಿ ಪಾವತಿಸ ಲಾಗುತ್ತಿದೆ. ಆದರೆ, ಪೊನ್ನಂಪೇಟೆ ತಾಲ್ಲೂಕು ರಚನೆಯಾದರೆ ತಾಲೂಕು ಕೇಂದ್ರದಲ್ಲಿ ವಾಣಿಜ್ಯ ತೆರಿಗೆ ಕಛೇರಿ ಸ್ಥಾಪನೆಯಾಗುವದರಿಂದ ಸಮೀಪದ ಪೊನ್ನಂಪೇಟೆಯಲ್ಲಿಯೇ ತೆರಿಗೆ ಪಾವತಿಸಲು ಅನುಕೂಲವಾಗುತ್ತದೆ. ಆದ್ದರಿಂದ ಎಲ್ಲ ಮೂಲ ಸೌಕರ್ಯ ಹೊಂದಿರುವ ಪೊನ್ನಂಪೇಟೆ ತಾಲೂಕು ರಚನೆಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಗೋಣಿಕೊಪ್ಪ ಮಚೆರ್ಂಟ್ ಕೋ-ಅಪರೇಟಿವ್ ಬ್ಯಾಂಕ್‍ನ ಅಧ್ಯಕ್ಷ ಕಿರಿಯಮಾಡ ಅರುಣ್ ಮಾತನಾಡಿ ಪೊನ್ನಂಪೇಟೆ ತಾಲ್ಲೂಕು ರಚನೆಗೆ ಹಲವು ವರ್ಷದಿಂದ ಬೇಡಿಕೆ ಇಟ್ಟು ಹೋರಾಟ ನಡೆಯುತ್ತಿದೆ. ಆದರೆ, ಯಾವ ಸರ್ಕಾರಗಳು ಇತ್ತ ಗಮನ ಹರಿಸಿಲ್ಲ. ಆದ್ದರಿಂದ ಆದಷ್ಟು ಬೇಗ ತಾಲೂಕು ರಚನೆಗೆ ಸರ್ಕಾರ ಮುಂದಾ ಗುವ ಮೂಲಕ ಈ ವ್ಯಾಪ್ತಿಯ ಜನರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕೆಂದು ಹೇಳಿದರು.
ಗೋಣಿಕೊಪ್ಪ ಚೇಂಬರ್ ಆಫ್ ಕಾರ್ಮಸ್‍ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ಮಾತನಾಡಿ ತಾಲೂಕು ರಚನೆಯ ಬೇಡಿಕೆ ಅತ್ಯಂತ ಸಮರ್ಥನೆಯವಾಗಿದೆ. ತಾಲೂಕು ರಚನೆಗೆ ಎಲ್ಲಾ ರೀತಿಯಲ್ಲಿ ಅರ್ಹತೆ ಇರುವ ಪೊನ್ನಂಪೇಟೆಯನ್ನು ತಾಲೂಕಾಗಿ ರಚನೆ ಮಾಡಲು ಮುಂದಾಗುವ ಹೋರಾಟಕ್ಕೆ ಎಲ್ಲ ಬೆಂಬಲ ನೀಡಲಾಗುವದೆಂದು ಹೇಳಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಕಾಡ್ಯಮಾಡ ಗಿರೀಶ್ ಗಣಪತಿ, ಚೇಂದಂಡ ಸುಮಿ ಸುಬ್ಬಯ್ಯ, ಕೇಶವ್ ಕಾಮತ್, ಕಾಳಿಮಾಡ ಎಂ. ಮೋಟಯ್ಯ, ಮೂಕಳೇರ ಪಿ. ಲಕ್ಷ್ಮಣ, ನಂದಕುಮಾರ್ ಪಿ.ಎಂ, ಮತ್ರಂಡ ಅಪ್ಪಯ್ಯ, ಸಿ.ಎಂ. ಮುತ್ತಪ್ಪ, ಕೆ.ಕೆ. ಭೀಮಯ್ಯ, ಟಿ.ಬಿ. ಅಯ್ಯಪ್ಪ, ತಾತೀರ ಎಂ.ಚಿಣ್ಣಪ್ಪ, ಕೆ.ಎ.ವಿಠಲ, ಪಿ.ಕೆ. ತಿಮ್ಮಯ್ಯ, ಸಿ.ಎನ್. ಅಪ್ಪಯ್ಯ, ಚೆಪ್ಪುಡೀರ ಸೋಮಯ್ಯ, ಎ.ಕೆ. ಅಚ್ಚಯ್ಯ, ಸಿ.ಎನ್. ಉತ್ತಪ್ಪ, ಕೆ.ಎಂ. ನಂಜಪ್ಪ, ಎನ್.ಕೆ. ದೇವಯ್ಯ, ಕೆ.ಎಂ. ಅಯ್ಯಪ್ಪ, ಕೆ.ಆರ್. ಬಾಲಕೃಷ್ಣ ರೈ, ರಾಣಿ ನಾರಾಯಣ್, ರೀಣಾ ಉಮೇಶ್, ರತಿ ಅಚ್ಚಪ್ಪ, ವಿ.ಜಿ. ಮನೋಹರ್, ಬಿ.ಎಸ್. ರಮೇಶ್, ಎಂ.ಎಸ್. ಕುಶಾಲಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಈ ಸಂದರ್ಭ ಪೊನ್ನಂಪೇಟೆ ಉಪ ತಹಶೀಲ್ದಾರ್‍ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.