ಕೂಡಿಗೆ, ನ. 22: ಕುಶಾಲನಗರ -ಕೂಡಿಗೆ ಹೆದ್ದಾರಿಯಲ್ಲಿ ಕೂಡುಮಂಗಳೂರು ಸಮೀಪ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಗೆ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.ಕೂಡ್ಲೂರು ಕೈಗಾರಿಕಾ ಬಡಾವಣೆಯಿಂದ ಕೈಗಾರಿಕಾ ವಸ್ತುಗಳನ್ನು ತುಂಬಿಕೊಂಡು ಕೂಡಿಗೆ ಕಡೆಗೆ ತೆರಳುತ್ತಿದ್ದ ಲಾರಿಗೆ ಕೂಡಿಗೆ ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕೂಡ್ಲೂರು ಕೈಗಾರಿಕ ಕಾಫಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿರಂಗಾಲ ಸಮೀಪದ ನಲ್ಲೂರು ಗ್ರಾಮದ ಬಸವರಾಜ್‍ಗೆ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಹಿಂಬದಿ ಕುಳಿತಿದ್ದ ಬಸವರಾಜ್ ಪತ್ನಿ ರುಕ್ಮಿಣಿಯವರ ಕೈ ಮುರಿತಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಈ ಇಬ್ಬರು ಗಾಯಾಳುಗಳಿಗೆ ಕುಶಾಲನಗರ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಯಿತು.

ಪ್ರಕರಣವು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಲಾರಿ ಚಾಲಕ ಮೋಹನ್ ಎಂಬುವವರ ಮೇಲೆ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.