ವೀರಾಜಪೇಟೆ, ನ. 22: ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯ 225ನೇ ಹಾಗೂ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ 175ನೇ ಮಹೋತ್ಸವ ಇಂದು ಜರುಗಲಿದೆ.
ಅಪರಾಹ್ನ 2.30 ಗಂಟೆಗೆ ಶಾಲಾ ಮೈದಾನದಲ್ಲಿ ಜರುಗಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ: ಕೆ.ಎ.ವಿಲಿಯಂ ವಹಿಸಲಿದ್ದು ಅತಿಥಿಗಳಾಗಿ ಫಾ: ಸಿ.ರಾಯಪ್ಪ, ಫಾ:ಲೆಸ್ಲಿ ಮೊರಾಸ್, ಫಾ: ವಿಜಯಕುಮಾರ್, ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಉಸ್ತುವಾರಿ ಸಚಿವ ಸೀತಾರಾಂ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಸಂತ ಅನ್ನಮ್ಮ ದೇವಾಲಯದ ಮಹೋತ್ಸವದ ಪ್ರಧಾನ ಸಂಚಾಲಕ ರೆ:ಫಾ: ಮದಲೈಮುತ್ತು ತಿಳಿಸಿದ್ದಾರೆ.