ಶನಿವಾರಸಂತೆ, ನ. 8: ಕೊಡ್ಲಿಪೇಟೆ ಹೋಬಳಿ ಬೆಸೂರು ಗ್ರಾ.ಪಂ. ವ್ಯಾಪ್ತಿಯ ನಿಲುವಾಗಿಲು ಗ್ರಾಮದ (ಕೊಡಗಿನ ಗಡಿಭಾಗ) ಪೊಲೀಸ್ ಚೆಕ್‍ಪೋಸ್ಟ್ ಪುರಾತನ ಮನೆಯೊಂದಿದೆ. ಆ ಮನೆಯಲ್ಲಿ ಸತ್ತವರ ಆತ್ಮಗಳು ರಾತ್ರಿ ಚಟುವಟಿಕೆ ಗಳಿಂದ ಕರ್ತವ್ಯ ನಿರ್ವಹಿಸುವ ಶನಿವಾರಸಂತೆ ಪೊಲೀಸರು ಭಯ ಭೀತರಾಗಿದ್ದಾರೆ.

ಈಗ್ಗೆ ಕೆಲವು ವರ್ಷಗಳ ಹಿಂದೆ ನಿಲುವಾಗಿಲು ಗ್ರಾಮದಲ್ಲಿ ಈ ಪುರಾತನ ಮನೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಆಗಿದ್ದು, ಇದೀಗ ಒಂದು ವರ್ಷದಿಂದ ಪೊಲೀಸ್ ಚೆಕ್‍ಪೋಸ್ಟ್ ಆಗಿದೆ. ಈ ಮನೆಯಲ್ಲಿ ಹಿಂದೆ ಕೆಇಬಿ ಲೈನ್‍ಮ್ಯಾನ್ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿರುತ್ತಾನೆ. ಅರಣ್ಯ ಸಿಬ್ಬಂದಿಯೊಬ್ಬ ಮನೆ ಯೊಳಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಹೊರ ಭಾಗದ ರಸ್ತೆಯಲ್ಲಿ ವಾಹನ ಅಪಘಾತದಿಂದೋರ್ವ ಮೃತಪಟ್ಟಿರುತ್ತಾನೆ ಹಾಗೂ ಸ್ವಲ್ಪ ದೂರದ ಮನೆಯೊಂದರಲ್ಲಿ ಮಹಿಳೆ ಎರಡು ಮಕ್ಕಳ ಸಹಿತ ಕೆಲವು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವರು ಎಂಬದಾಗಿ ಸುದ್ದಿ ಇದೆ. ಈ ಮನೆಯಲ್ಲಿ ವಿದ್ಯುತ್ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಪಕ್ಕದಲ್ಲಿ ಯಾವದೇ ವಾಸದ ಮನೆಗಳಿಲ್ಲ. ಕರ್ತವ್ಯಕ್ಕೆ ನಿಯೋಜಿತ ರಾದ ಶನಿವಾರಸಂತೆ ಪೊಲೀಸರು ರಾತ್ರಿ ವೇಳೆ ಸೀಮೆಎಣ್ಣೆ ದೀಪ ದೊಂದಿಗೆ ಬೆಂಕಿ ಹಾಕಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ. ನಿದ್ದೆ ಮಾಡಿದರೆ ಮೈ ಮುಟ್ಟಿ ಎಳೆದಂತಾಗುತ್ತದೆ, ಹೊರ ಭಾಗದಲ್ಲಿ ಶಬ್ಧವಾಗುತ್ತದೆ, ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರು ಭಯ ಭೀತರಾಗಿ ಚೆಕ್‍ಪೋಸ್ಟ್ ಬಿಟ್ಟು ಊರಿಗೆ ಬಂದಿರುವದು ಉಂಟು. ಈ ಬಗ್ಗೆ ಅನುಭವವಾದ ಪೊಲೀಸರು ತಮ್ಮ ಭಯವನ್ನು ಪತ್ರಿಕೆಯೊಂದಿಗೆ ಹೇಳಿಕೊಂಡಿರುವರು. ಇತ್ತೀಚೆಗೆ ಸಮೀಪದ ಬಾಲತ್ರಿಪುರ ಸುಂದರಮ್ಮ ಪ್ರಸಿದ್ಧ ದೇವಾಲಯದ ತಂತ್ರಿಗಳನ್ನು ಪೊಲೀಸರು ಪುರಾತನ ಚೆಕ್‍ಪೋಸ್ಟ್ ಮನೆಗೆ ಕರೆ ತಂದು ಮೃತಪಟ್ಟವರ ಆತ್ಮಶಾಂತಿಗಾಗಿ ಆತ್ಮಗಳ ಆರಾಧನೆ ಹೋಮ, ಹವನಗಳನ್ನು ಮಾಡಿಸಿ ರುತ್ತಾರೆ. ಪೊಲೀಸರ ಪ್ರಶ್ನೆಗಳಿಗೆ ತಂತ್ರಿಗಳು ಉತ್ತರಿಸುತ್ತಾ, ಈ ಮನೆಯಲ್ಲಿ ಪ್ರೇತಾತ್ಮಗಳಿವೆ. ನಿಮ್ಮಗಳ ಖಾಕಿ ಶಕ್ತಿಯಿಂದ ನಿಮ್ಮಗಳಿಗೆ ತೊಂದರೆಯಾಗಿಲ್ಲ ಎಂದು ತಿಳಿಸಿ ದರಂತೆ! ಅಂದಿನಿಂದ ಪೊಲೀಸರು ಹೆಚ್ಚಿಗೆ ಭಯಗೊಂಡಿದ್ದಾರೆ.

- ನರೇಶ್ಚಂದ್ರ