ಪಾಲೆಮಾಡಿನಲ್ಲಿ ಕ್ರಿಕೆಟ್ ಸಂಸ್ಥೆಗೆ ಮಂಜೂರು ಮಾಡಿರುವ ದಲಿತರ ಸ್ಮಶಾನದ ಜಾಗವನ್ನು ಸ್ಮಶಾನಕ್ಕಾಗಿಯೇ ಮೀಸಲಿಟ್ಟು ಜಿಲ್ಲಾಡಳಿತ ಆದೇಶ ಹೊರಡಿಸದಿದ್ದಲ್ಲಿ, ಬೇಲಿ ತೆರವು ಮತ್ತು ಜೈಲ್ ಬರೋ ಚಳುವಳಿ ನಡೆಸಲು ನಿರ್ಧರಿಸಲಾಗಿದೆಯೆಂದು ಬಹುಜನ ಕಾರ್ಮಿಕರ ಸಂಘÀದ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ದಲಿತರನ್ನು ವಂಚಿಸುತ್ತಿದೆÀಯೆಂದು ಆರೋಪಿಸಿದರು. ಸ್ಮಶಾನದ ಜಾಗಕ್ಕಾಗಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ ಸಂದರ್ಭ ನವೆಂಬರ್ 11 ಕ್ಕೆ ಉಪ ವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎನ್ನುವ ಭರವಸೆ ದೊರೆತ್ತಿದೆ. ಎಸಿ ಬರುವಲ್ಲಿಯವರೆಗೆ ಸ್ಥಳದಲ್ಲಿ ಸಾಂಕೇತಿಕವಾಗಿ ಧರಣಿ ಮುಷ್ಕರ ಮುಂದುವರೆಸುವದಾಗಿ ತಿಳಿಸಿದರು.

ಜಿಲ್ಲಾಡಳಿತದ ಭರವಸೆಯಂತೆ ಬೇಡಿಕೆ ಈಡೇರದಿದ್ದಲ್ಲಿ ಕ್ರಿಕೆಟ್ ಸಂಸ್ಥೆ ನಿರ್ಮಿಸಿರುವ ಬೇಲಿಯನ್ನು ತೆರವುಗೊಳಿಸಿ ಜೈಲು ಬರೋ ಚಳುವಳಿ ನಡೆಸಲಾಗುವದು. ಅಲ್ಲದೆ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಚಿಸುವ ಜಿಲ್ಲಾಡಳಿತದ ಶವ ಯಾತ್ರೆಯಲ್ಲಿ ಬಹುಜನ ಕಾರ್ಮಿಕ ಸಂಘ ಪಾಲ್ಗೊಳ್ಳಲಿದೆ ಎಂದರು.

ಈ ಹಿಂದೆ ದಲಿತರ ಸ್ಮಶಾನಕ್ಕಾಗಿ ಮಂಜೂರಾಗಿದ್ದ ಭೂಮಿಯನ್ನು ಸ್ಮಶಾನಕ್ಕೆ ಮೀಸಲಿಡದೆ ವಾಟೆಕಾಡು ಪೈಸಾರಿಯಲ್ಲಿ ಸ್ಮಶಾನವನ್ನು ನಿರ್ಮಿಸಲಾಗುತ್ತಿದೆ. ಇದರಿಂದ ದಲಿತರ ಅನುದಾನ ದುರುಪಯೋಗುತ್ತದೆ ಎಂದು ಆರೋಪಿಸಿದ ಮೊಣ್ಣಪ್ಪ, ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ದಲಿತರಿಗೆ ಅನ್ಯಾಯ ಮಾಡಿದ ಪ್ರಕರಣವನ್ನು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೊದ್ದೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಪಿ.ಎ.ಕುಸುಮಾವತಿ ಮಾತನಾಡಿ, ಪಾಲೆಮಾಡು ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡುವದರೊಂದಿಗೆ ನಿವೇಶನದ ಹಕ್ಕುಪತ್ರವನ್ನು ಹಂಚಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಹುಜನ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಆನಂದ, ಪ್ರಧಾನ ಕಾರ್ಯದರ್ಶಿ ಎಂ.ಅಶ್ವತ್ಥ್ ಮೌರ್ಯ, ಪ್ರಮುಖರಾದ ಬಿ.ಕೆ. ಕೃಷ್ಣಪ್ಪ ಹಾಗೂ ನಿಶಾ ಉಪಸ್ಥಿತರಿದ್ದರು.ಇಲ್ಲಿಯವರೆಗೆ ಪುನರ್ವಸತಿ ಪ್ರದೇಶದಲ್ಲಿ ಸುಮಾರು 7 ಮಂದಿ ಹಸಿವು ಮತ್ತು ಅನಾರೋಗ್ಯದಿಂದ ಮೃತಪಟ್ಟಿದ್ದು, ಇದಕ್ಕೆ ಜಿಲ್ಲಾಡಳಿತವೇ ನೇರ ಕಾರಣವೆಂದು ಆರೋಪಿಸಿದರು.

ತಾ. 12 ರಂದು ಕೊಡಗಿನಲ್ಲಿ ಜಿಲ್ಲಾಡಳಿತದ ಶವಯಾತ್ರೆಯನ್ನು ಆರಂಭಿಸಲಾಗುವದು. ತಾ. 13 ರಂದು ಬೆಳಗಾವಿಗೆ ತೆರಳಿ ಅಧಿವೇಶನದ ಸಂದರ್ಭ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದೆಂದರು.

ಜಿಲ್ಲೆಯಲ್ಲಿ ಸಿ ಅಂಡ್ ಡಿ ಭೂಮಿಯ ಹಕ್ಕನ್ನು ನೀಡುವ ಕುರಿತು ಮಾತುಗಳು ಕೇಳಿ ಬರುತ್ತಿದ್ದು, ಉಳ್ಳವರಿಗೆ ಭೂಮಿಯನ್ನು ಸಕ್ರಮ ಮಾಡಿಕೊಡುವ ಆರೋಪವಿದೆ. ಸಿ ಅಂಡ್ ಡಿ ಭೂಮಿಯ ಹಕ್ಕನ್ನು ಬಡವರಿಗೇ ನೀಡಬೇಕೆಂದು ನಿರ್ವಾಣಪ್ಪ ಆಗ್ರÀಹಿಸಿದರು.

ಟಿಪ್ಪು ಜಯಂತಿ ದಿನ ಪ್ರಗತಿಪರರು ಕೊಡಗು ಬಂದ್‍ಗೆ ಬೆಂಬಲ ಸೂಚಿಸುವದಿಲ್ಲವೆಂದು ಸ್ಪಷ್ಟಪಡಿಸಿದ ನಿರ್ವಾಣಪ್ಪ, ಸರ್ಕಾರದ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಬೇಕು ಎಂದರು.

ಸಮಿತಿಯ ಪ್ರಮುಖರಾದ ಅಮಿನ್ ಮೊಹಿಸಿನ್ ಮಾತನಾಡಿ, ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ಉತ್ಸಾಹ ಜಿಲ್ಲಾಡಳಿತಕ್ಕೆ ಇಲ್ಲವೆಂದು ಟೀಕಿಸಿದರು. ಅಧಿಕಾರಿಗಳು ಬಡವರ ಪರವಾಗಿಲ್ಲ ಎನ್ನುವದಕ್ಕೆ ಪಾಲೆಮಾಡಿನ ಸ್ಮಶಾನದ ವಿವಾದವೇ ಸಾಕ್ಷಿಯಾಗಿದೆಯೆಂದು ಆರೋಪಿಸಿದರು. 2002ರಲ್ಲಿ ಮಂಜೂರಾಗಿರುವ ಸ್ಮಶಾನದ ಜಾಗವನ್ನು ದುರಸ್ತಿ ಪಡಿಸಬೇಕಾದ ಜಿಲ್ಲಾಡಳಿತ ಉಳ್ಳವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದರು. ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆ ಸ್ಥಳದಲ್ಲಿ ನಿರ್ಮಿಸಲಿ ಎಂದು ಒತ್ತಾಯಿಸಿದ ಅವರು, ಕಳೆದ 10 ದಿನಗಳಿಂದ ಸ್ಮಶಾನಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು ಅಧಿಕಾರಿಗಳಾಗಲಿ, ಜನಪ್ರತಿನಿಧಿ ಗಳಾಗಲಿ ಸ್ಪಂದಿಸಿಲ್ಲ. ಮನೆ ಮನೆಗೆ ಭೇಟಿ ನೀಡುವ ರಾಜಕಾರಣಿಗಳು ಈ ಬಡವರ ಮನೆಗೆ ಬಂದು ಯಾಕೆ ಕಷ್ಟಗಳಿಗೆ ಸ್ಪಂದಿಸಿಲ್ಲವೆಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಸಣ್ಣಪ್ಪ, ಅಪ್ಪು ಹಾಗೂ ಕೆ. ಶ್ರೀನಿವಾಸ್ ಉಪಸ್ಥಿತರಿದ್ದರು.