ನಾಪೋಕ್ಲು, ನ. 8: ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ 27 ನೇ ವರ್ಷ ಕೊಡವ ನ್ಯಾಷನಲ್ ಡೇ ಯನ್ನು ತಾ. 26 ರಂದು ಪೂರ್ವಾಹ್ನ 10.30 ಗಂಟೆಗೆ ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಆಚರಿಸ ಲಾಗುವದು ಎಂದು ಸಿ.ಎನ್.ಸಿ. ಅಧ್ಯಕ್ಷ ನಂದಿನೆರವಂಡ ನಾಚಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಡಾ. ಸುಬ್ರಮಣ್ಯ ಸ್ವಾಮಿ, ಅತಿಥಿಗಳಾಗಿ ಮುಂಬೈನ ಉದ್ಯಮಿ ವಿರಾಟ ಹಿಂದೂ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಜಗದೀಶ್ ಶೆಣೈ ಭಾಗವಹಿಸಲಿರುವರು ಎಂದರು.

ಈ ಸಂದರ್ಭ ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತ್ರಿ, ಸಂವಿಧಾನದ ಪ್ರಕಾರ ಸ್ವಾಯತ್ತತೆ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆ, ದೇವಟಿ ಪರಂಬು ರಾಷ್ಟ್ರೀಯ ಸ್ಮಾರಕಕ್ಕೆ ಹಕ್ಕೋತ್ತಾಯ ಸೇರಿದಂತೆ ಹಲವಾರು ಬೇಡಿಕೆ ಬಗ್ಗೆ ಕಾರ್ಯಕ್ರಮದಲ್ಲಿ ಹಕ್ಕೊತ್ತಾಯವನ್ನು ಮಂಡಿಸ ಲಾಗುವದು ಎಂದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಭಾರತರತ್ನ ನೀಡಲು ಹಿಂದೇಟು ಹಾಕುತ್ತಿರುವ ಸರ್ಕಾರ ಟಿಪ್ಪು ಸುಲ್ತಾನ ನಿಗೆ ಆ ಪ್ರಶಸ್ತಿ ನೀಡಲು ಹವಣಿಸುತ್ತಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಸಿ.ಎನ್.ಸಿ. ಹಿರಿಯ ಮುಖಂಡ ಕಲಿಯಂಡ ಪ್ರಕಾಶ್ ಕಾರ್ಯಪ್ಪ, ಚಂಬಂಡ ಜನತ್, ಬೆಪ್ಪುಡಿಯಂಡ ವಿನು, ಕೈಬುಲೀರ ಪ್ರಕಾಶ್, ಕಾಂಡಂಡ ಜುಮ್ಮ ಅಚ್ಚಪ್ಪ ಇದ್ದರು.