ಮಡಿಕೇರಿ, ನ. 4: ಇಲ್ಲಿನ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇಂದು ಕಾರ್ತಿಕ ಹುಣ್ಣಿಮೆ ಪ್ರಯುಕ್ತ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ಮಂಟಪೋತ್ಸವ ದೊಂದಿಗೆ ವಿಶೇಷ ಪೂಜೆ ನೆರವೇರಿತು. ಸೇವಾಕರ್ತರಾದ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸಂಸಾರ ದೊಂದಿಗೆ ಭಾಗವಹಿಸಿದ್ದರು. ದೇವಾಲಯ ಕಾ.ನಿ. ಅಧಿಕಾರಿ ಸಂಪತ್‍ಕುಮಾರ್, ಅರ್ಚಕ ವೃಂದ, ಭಕ್ತ ಸಮೂಹ ಪಾಲ್ಗೊಂಡಿದ್ದರು.