ಭಾಗಮಂಡಲ, ಅ. 30: ಇಲ್ಲಿನ ದೇವಾಲಯ ಪರಿಸರದ ಅಡುಗೆ ಕೋಣೆ ಸಹಿತ ಪಕ್ಕದ ಹೊಟೇಲ್ ಇತ್ಯಾದಿಯ ಚರಂಡಿಯ ಕೊಳಚೆ ನೀರೆಲ್ಲ ನೇರವಾಗಿ ಕಾವೇರಿ ಒಡಲು ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕೊಳಚೆ ನೀರಿನ ದುರ್ನಾತದಿಂದ ಚರಂಡಿಯಲ್ಲಿ ಹರಿಯುವ ಗಲೀಜಿನಿಂದ ಸಂಚರಿಸಲು ಕೂಡ ಹೇಸಿಗೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರು ಗಮನಹರಿಸಿ ದೇಗುಲದ ಅನ್ನಶಾಲೆ ಹಾಗೂ ಇತರೆಡೆಯ ಗಂಜಿ ಇತ್ಯಾದಿಯಿಂದ ದುರ್ನಾತ ಹರಡದಂತೆ ಮತ್ತು ಹೊಳೆಗೆ ಸೇರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ನಾಮಕಾವಸ್ಥೆಗೆ ಪೈಪ್ ಅಳವಡಿಸಿದ್ದರೂ, ಅದು ತುಂಬಿಕೊಂಡು ಚರಂಡಿಯಿಂದ ಗಲೀಜು ರಸ್ತೆಯಲ್ಲಿ ಹರಿಯುವಂತಾಗಿದೆ ಎಂದು ಸ್ಥಳೀಯರು ಬೊಟ್ಟು ಮಾಡಿದ್ದಾರೆ.