ನಾಪೆÇೀಕ್ಲು, ಅ. 21: ಸರಕಾರ ಚಾಪೆ ಕೆಳಗೆ ನುಸುಳಿದರೆ, ಕಳ್ಳರು ರಂಗೋಲಿ ಕೆಳಗೆ ನುಸುಳುತ್ತಾರೆ ಎಂಬದಕ್ಕೆ ನಾಪೆÇೀಕ್ಲುವಿನಲ್ಲಿ 500 ರೂ. ಮುಖ ಬೆಲೆಯ ನೋಟು ಪತ್ತೆಯಾಗಿರುವದೇ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ಸರಕಾರ ಖೋಟಾ ನೋಟು ದಂಧೆ ತಡೆಯಲು 1000 ಮತ್ತು 500 ರೂ.ಗಳನ್ನು ನೋಟ್ ಬ್ಯಾನ್ ಮಾಡಿ ನೂತನ ತಂತ್ರಗಾರಿಕೆಯಲ್ಲಿ 2000 ಮತ್ತು 500 ರೂ. ಗಳನ್ನು ಚಲಾವಣೆ ತಂದಿದೆ. ಆದರೂ ಕೂಡ ಕಳ್ಳ ನೋಟು ದಂಧೆಕೋರರು ಈ ನೋಟು ಗಳನ್ನು ನಕಲಿ ಮಾಡಿ ತಮ್ಮ ಕೈಚಳಕ ತೋರುವಲ್ಲಿ ಯಶಸ್ವಿಯಾಗಿದ್ದಾರೆ.

ನಾಪೆÇೀಕ್ಲುವಿನ ಬಿಜೆಪಿ ಮುಖಂಡ ಪಾಡಿಯಮ್ಮಂಡ ಮನು ಮಹೇಶ್ ಅವರಿಗೆ ಈ ನಕಲಿ 500 ರೂ. ನೋಟು ದೊರೆತಿದ್ದು ಅದನ್ನು ಅವರು ‘ಶಕ್ತಿ’ಯ ಗಮನಕ್ಕೆ ತಂದಿದ್ದಾರೆ. ಖೋಟಾ ನೋಟು ಅಸಲಿ ನೋಟಿಗಿಂತ ಉದ್ದ ಕಡಿಮೆಯಾಗಿದ್ದು, ನೋಟಿನಲ್ಲಿ ಬರೆದಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗೆ ನಮೂದಿಸಿರುವ ‘ಸೆಂಟ್ರಲ್ ಗೌರ್‍ಮೆಂಟ್’ ಪದದಲ್ಲಿ ಸೆಂಟ್ರಲ್‍ನ ಆರಂಭಿಕ ‘ಅ’ ಅಕ್ಷರದ ಬದಲಿಗೆ ‘ಉ’ ಅಕ್ಷರ ನಮೂದಾಗಿದ್ದು, ಗೆಂಟ್ರಲ್ ಗೌರ್‍ಮೆಂಟ್ ಎಂದಾಗಿದೆ. ಗಾಂಧೀಜಿ ಭಾವ ಚಿತ್ರದ ಒಳಗೆ ಬರೆದಿರುವ 500 ಅಕ್ಷರ ಅಸಲಿ ನೋಟಿನಲ್ಲಿ ಎರಡು ಸುತ್ತಿನಲ್ಲಿದ್ದು. ನಕಲಿ ನೋಟಿನಲ್ಲಿ ಒಂದೇ ಸುತ್ತಿನಲ್ಲಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಮನು ಮಹೇಶ್ ಬಡವರಿಗೆ ಕೂಲಿ ಕಾರ್ಮಿಕರಿಗೆ ಇಂತಹ ನೋಟು ದೊರೆತಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಪಾಯವಿದೆ. ಖೋಟಾ ನೋಟು ಜಾಲವನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೆÇಲೀಸ್ ಇಲಾಖೆ ತಕ್ಷಣ ಕೈಗೊಳ್ಳಬೇಕು ಎಂದರು.

-ಪಿ.ವಿ.ಪ್ರಭಾಕರ್