ಮಡಿಕೇರಿ, ಅ. 20: ತನ್ನ ಸಂಬಂಧಿಕರ ಮನೆಯಲ್ಲಿ ಪಿತೃ ಕಾರ್ಯಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಮಾರ್ಗ ಬದಿ ಆಟೋರಿಕ್ಷಾ ಏರಲು ಬರುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವಿಗೀಡಾದ ದುರ್ಘಟನೆ ಇಂದು ಮಧ್ಯಾಹ್ನ ಗರಗಂದೂರುವಿನಲ್ಲಿ ಸಂಭವಿಸಿದೆ.ಇಲ್ಲಿಗೆ ಸಮೀಪದ ಬೆಟ್ಟತ್ತೂರು ಗ್ರಾಮದ ನಿವಾಸಿ ಕುದುಕುಳಿ ತಮ್ಮಯ್ಯ (65) ಎಂಬವರೇ ಮೃತ ದುರ್ದೈವಿ. ಸುಂಟಿಕೊಪ್ಪ ಬಳಿಯ ಗರಗಂದೂರುವಿನಲ್ಲಿ ಸಂಬಂಧಿಕರ ಮನೆಗೆ ಬಂದು ಅಲ್ಲಿಂದ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಹಿಂತೆರಳಲು ಆಟೋ ಹತ್ತುವಷ್ಟರಲ್ಲಿ ಈ ದುರ್ಘಟನೆ ಎದುರಾಗಿದೆ.ಮಾದಾಪುರ ಇಗ್ಗೋಡ್ಲು ಆಶ್ರಯಬಾಣೆಯ ನಿವಾಸಿಗಳಾದ ಪ್ರಶಾಂತ್ ಎಂಬಾತ ಚಾಲಿಸುತ್ತಿದ್ದ ಬೈಕ್ (ಕೆ.ಎ. 12 ಎಲ್. 9354) ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ತಮ್ಮಯ್ಯ ಸ್ಥಳದಲ್ಲೇ ಕೊನೆಯುಸಿರೆಳೆ ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸು ವಷ್ಟರಲ್ಲಿ ಅವರು ಮೃತರಾಗಿರುವದು ದೃಢಪಟ್ಟಿದೆ. ಬೈಕ್ ಸವಾರ ಸಣ್ಣಪುಟ್ಟ ಗಾಯಗೊಂಡಿದ್ದು, ಹಿಂಬದಿ ಸವಾರ ಹರೀಶ್ ಎಂಬಾತನ ದವಡೆ ಭಾಗಕ್ಕೆ ಗಂಭೀರ ಹೊಡೆತ ಬಿದ್ದಿದೆ.