ಕರಿಕೆ, ಅ. 9: ಕರ್ನಾಟಕ ಹಾಗೂ ಕೇರಳದ ಗಡಿ ಗ್ರಾಮವಾದ ಕರಿಕೆಗೆ ಕಳೆದ ಹಲವಾರು ವರ್ಷಗಳ ಗ್ರಾಮಸ್ಥರ ಬೇಡಿಕೆಯ ಫಲವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಗ್ರಾಮಗಳಲ್ಲಿ ತಲಾ ಹತ್ತು ಲಕ್ಷ ರೂಪಾಯಿಗಳಂತೆ 150 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವ ಒಟ್ಟು 150 ಆರೋಗ್ಯ ವಿಸ್ತರಣಾ ಕೇಂದ್ರಗಳಿಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು ಈ ಪೈಕಿ ಕರಿಕೆ ಆರೋಗ್ಯ ಕೇಂದ್ರ ಕೂಡ ಒಳಗೊಂಡಿದೆ.
ಚಿಕಿತ್ಸಾಲಾಯವು ಓರ್ವ ವೈದ್ಯ, ಒಬ್ಬ ಶುಶ್ರೂಶಕ, ಒಬ್ಬ ಫಾರ್ಮಲಿಸ್ಟ್ ಹಾಗೂ ಓರ್ವ ಅಟೆಂಡರನ್ನು ಹೊಂದಿರುತ್ತದೆ. ಕಳೆದ ಕಲ ತಿಂಗಳುಗಳ ಹಿಂದೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಆರೋಗ್ಯ ಕೇಂದ್ರ ಒದಗಿಸಿ ಕೊಡಲು ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
-ಸುಧೀರ್ ಹೊದ್ದೆಟ್ಟಿ