ಸೋಮವಾರಪೇಟೆ, ಸೆ. 18: ದಲಿತ ಸಮುದಾಯದವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ವಾಗಿ ನೆಲೆ ಕಾಣುವಂತಾಗಬೇಕು. ಆ ಮೂಲಕ ದಲಿತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯ ಸಂಯೋಜಕ ವಿ. ನಾಗರಾಜ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದೈಹಿಕವಾಗಿ ಶ್ರಮಿಸುವ ದಲಿತರು ಇಂದಿಗೂ ಶ್ರಮಜೀವಿಗಳಾಗಿಯೇ ಉಳಿದಿರುವದು ದುರಂತ. ದಲಿತರ ಅಭಿವೃದ್ಧಿಗಾಗಿ ಸರಕಾರ ಕೆಲವು ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ಪ್ರಯತ್ನಿಸಿದರೂ ಸಹ ಉಪಯೋಗಿಸಿಕೊಳ್ಳದ ದಲಿತರು ಮತ್ತೆ ಮುಖ್ಯ ವಾಹಿನಿಯಿಂದ ಹೊರಗುಳಿಯುತ್ತಿರುವದು ವಿಪರ್ಯಾಸ. ಇದು ಬದಲಾಗ ಬೇಕಾದರೆ ದಲಿತರು ರಾಜಕೀಯ ವಾಗಿ ನೆಲೆ ಕಾಣಬೇಕು ಎಂದರು.
ಸಮಿತಿಯ ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ ಮಾತನಾಡಿ, ದಲಿತರ ಅಭಿವೃದ್ಧಿಗಾಗಿ ಅಭಿವೃದ್ಧಿಗಾಗಿ ಸರಕಾರ ಕೆಲವು ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ಪ್ರಯತ್ನಿಸಿದರೂ ಸಹ ಉಪಯೋಗಿಸಿಕೊಳ್ಳದ ದಲಿತರು ಮತ್ತೆ ಮುಖ್ಯ ವಾಹಿನಿಯಿಂದ ಹೊರಗುಳಿಯುತ್ತಿರುವದು ವಿಪರ್ಯಾಸ. ಇದು ಬದಲಾಗ ಬೇಕಾದರೆ ದಲಿತರು ರಾಜಕೀಯ ವಾಗಿ ನೆಲೆ ಕಾಣಬೇಕು ಎಂದರು.
ಸಮಿತಿಯ ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ ಮಾತನಾಡಿ, ದಲಿತರ ಅಭಿವೃದ್ಧಿಗಾಗಿ