ಮಡಿಕೇರಿ, ಸೆ. 8: ಬಾಳೆ ತೋಟಗಾರಿಕೆ ಬೆಳೆಗಳಲ್ಲಿನ ಹಣ್ಣಿನ ಬೆಳೆಗಳಲ್ಲಿ ಅತೀ ಮುಖ್ಯವಾದ ಬೆಳೆಯಾಗಿದೆ. ಬಾಳೆಯನ್ನು ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಕೊಡಗಿನಲ್ಲಿ ಅವರವರ ಮನೆಗಳಲ್ಲಿ ಕೆಲವು ಕಂದುಗಳು ನೆಡುವದ ರೊಂದಿಗೆ ಇಂದು ಹೆಚ್ಚಿನ ಸ್ಥಳ ಆಕ್ರಮಿಸಿ ಮುಂದುವರಿಯುತ್ತಿದೆ.

ಸಂಶೋಧನೆಗಳು ಮುಂದು ವರಿದು ಕಾಲ ಹಾಗೂ ಪ್ರದೇಶಕ್ಕೆ ಸೂಕ್ತವಾದ ತಳಿಗಳನ್ನು ಅಭಿವೃದ್ಧಿ ಪಡಿಸಿ ಬೆಳೆಯಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು 380 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಾಗುತ್ತಿದೆ.

ವೈಜ್ಞಾನಿಕವಾಗಿ ಬಾಳೆ ಬೆಳೆಯಲು ಕೆಲವು ತಾಂತ್ರಿಕ ಸಲಹೆಗಳು ಜಮೀನಿನ ಹಾಗೂ ಕಂದುಗಳ ಆಯ್ಕೆ: ಚೆನ್ನಾಗಿ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಫಲವತ್ತಾದ ಗೋಡುಮಣ್ಣಿನ 5.5-7ಠಿh ಇರುವ ಜಮೀನು ಯೋಗ್ಯ. ನಾಟಿ ಮಾಡಲು ರೋಗ ರಹಿತ ಕಂದುಗಳನ್ನು ಆಯ್ಕೆ ಮಾಡುವದು. ಇತ್ತೀಚೆಗೆ ಬಂದ ಅಂಗಾಂಶ ಕೃಷಿ ಸಸಿಗಳು ರೋಗ ರಹಿತವಾಗಿರು ವದರಿಂದ ನಾಟಿಗೆ ಬಳಸಬಹುದು. ಬೀಜೋಪಚಾರ: ಶೇ.1 ರ ಕಾರ್ಬನ್ ಡೈಜಿಮ್ ಅಥವಾ 3 ಗ್ರಾಂ ಸಿ.ಒ.ಸಿ ಅನ್ನು 0.3 ಗ್ರಾಂ ಸ್ಟಪ್ಟ್ರೋ ಸೈಕ್ಲಿನ್ ದ್ರಾವಣದೊಂದಿಗೆ ಮಿಶ್ರಣ ಮಾಡಿ ಕಂದುಗಳನ್ನು 30 ನಿಮಿಷಗಳವರೆಗೆ ಅದ್ದಿ ನಾಟಿಗೆ ಬಳಸಬಹುದು. ನಾಟಿ ಮಾಡುವಿಕೆ: 1.5*1.5*1.5 ಅಡಿ ಅಳತೆಯ ಗುಂಡಿಗಳನ್ನು 1.8*1.8 ಮೀಟರ್ ಅಂತರದಲ್ಲಿ ತೆಗೆದು ನಾಟಿ ಮಾಡಬಹುದು.

ಗೊಬ್ಬರ ನಿರ್ವಹಣೆ: ಪ್ರತಿ ಹೆಕ್ಟೇರ್‍ಗೆ 25 ಟನ್ ಸಾವಯವ/ಕೊಟ್ಟಿಗೆ/ಕಾಂಪೊಸ್ಟ್ ಗೊಬ್ಬರದೊಂದಿಗೆ ಟ್ರೈಕೊಡರ್ಮ ಹಾರ್ಸಿಯಾನಂ 5 ರಿಂದ 8 ಕೆ.ಜಿ. ಎಂದರೆ 5 ರಿಂದ 8 ಕಾಳುಗಳನ್ನು (ಕ್ಯಾಪ್ಸಲ್ಸ್) ಮಿಶ್ರ ಮಾಡಿ ನಾಟಿ ಮಾಡುವದಕ್ಕಿಂತ ಮುಂಚೆ ಬಳಸುವದು. ಜೊತೆಗೆ ತಿಂಗಳಿಗೊಮ್ಮೆ ಶಿಫಾರಸ್ಸು ಮಾಡಿದ ರಾಸಯನಿಕ ಗೊಬ್ಬರ ಹಾಗೂ ಬೇಡಿಕೆ ಅನುಸಾರ ನೀರು ಕೊಡುವುದು. ನೀರು ನಿಲ್ಲದಂತೆ ನೋಡಿಕೊಳ್ಳುವದು.

ನಿಯಂತ್ರಣ: ರೋಗ ರಹಿತ ಕಂದುಗಳ ಆಯ್ಕೆ ಹಾಗೂ ಬೀಜೋಪಚಾರ. ಕಾರ್ಬನ್ ಡೈಸಿಯಂ 2 ಗ್ರಾಂ ಅಥವಾ ಸಿ.ಒ.ಸಿ 3 ಗ್ರಾಂ ಅಥವಾ ಟಿಲ್ಟ್ 1 ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಮುಂಜಾಗರುಕತೆ ಕ್ರಮವಾಗಿ 15 ದಿನಕೊಮ್ಮೆ ಬಳಸಬಹುದು. ನೀರು ನಿಲ್ಲದ ಹಾಗೆ ನೋಡಿಕೊಳ್ಳುವದು.

ವಿಶೇಷ ಸೂಚನೆ: ಅಧಿಕ ಇಳುವರಿಗೆ ಭಾರತೀಯ ತೋಟಗಾರಿಕ ಸಂಶೋಧನ ಕೇಂದ್ರ ಹೆಸರ ಘಟ್ಟ ಅವರ ಆರ್ಕ ಬನನ ಸ್ಪೇಷಲ್ 200 ಲೀಟರ್ ನೀರಿಗೆ 1 ಕೆ.ಜಿ.ಯಂತೆ ಬಳಸಬಹುದು.

ಮಣ್ಣು ಪರೀಕ್ಷೆ ಆಧಾರದ ಮೇಲೆ ಕೃಷಿ ಪರಿಕರಗಳನ್ನು ಬಳಸುವದು. ಜೈವಿಕ ಹಾಗೂ ರಾಸಾಯನಿಕ ಔಷಧಿ ಬಳಕೆಯ ಮಧ್ಯೆ 20 ರಿಂದ 30 ದಿನ ಅಂತರವಿರಲಿ. ನೀರಿನಲ್ಲಿ ಕರಗುವ ಗೊಬ್ಬರಗಳು ಲಭ್ಯವಿದ್ದು ಉತ್ತಮ ಗುಣಮಟ್ಟದ ಗೊಬ್ಬರಗಳನ್ನು ಅಧಿಕೃತ ಮರಾಟಗಾರರಿಂದ ಖರೀದಿಸಿ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಬಳಸುವದು.

ಪ್ರಧಾನಿ ಮಂತ್ರಿಯವರ ಕನಸಿನ ಕೂಸಾದ ನವ ಭಾರತ ಮಂಥನ: ಸಂಕಲ್ಪದಿಂದ ಸಿದ್ಧಿ ಯೋಜನೆ ಯಂತೆ 2022ರ ಹೊತ್ತಿಗೆ ರೈತರ ಕೃಷಿಯಲ್ಲಿನ ಆದಾಯ ದ್ವಿಗುಣ ಗೊಳಿಸುವಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆ ಅಗತ್ಯವಿದ್ದು, ರೈತರಿಗೆ ಬೇಕಾದ ವೈಜ್ಞಾನಿಕ ಮಾಹಿತಿ ನೀಡಲು ತೋಟಗಾರಿಕೆ ಇಲಾಖೆಯ ನುರಿತ ಅಧಿಕಾರಿಗಳು ಕಾರ್ಯ ಪ್ರವೃತರಾಗಿದ್ದಾರೆ. ಅದನ್ನು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಅಧಿಕ ಇಳುವರಿ ಯೊಂದಿಗೆ ಕೃಷಿಯಲ್ಲಿನ ಆದಾಯ ದ್ವಿಗುಣಗೊಳಿಸಿಕೊಳ್ಳುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ವಿಷಯ ತಜ್ಞರು ಹಾರ್ಟಿ ಕ್ಲಿನಿಕ್ ಮಡಿಕೇರಿರವರನ್ನು 9448401087 ಸಂಪರ್ಕಿಸಲು ಕೋರಲಾಗಿದೆ.