ಮಡಿಕೇರಿ, ಸೆ. 8: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಗ್ರಾಮ ಪಂಚಾಯಿತಿ ಮದೆ ಇವರ ಸಹಯೋಗದಲ್ಲಿ ಶ್ರೀ ಗೋಪಾಲಕೃಷ್ಣ ಯುವ ಸಂಘ ಮತ್ತು ಅವಂದೂರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡೋತ್ಸವ ಅವಂದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಪನ್ಯಾಸಕ ಪಟ್ಟಡ ಶಿವಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಾಧಕ-ಭಾದಕಗಳು ಇರುತ್ತದೆ. ಆದರೆ ಮೊಸರಲ್ಲಿ ಕಲ್ಲು ಹುಡುಕುವಂತಹ ಕೆಲಸ ಮಾಡಬಾರದು ಎಂದು ಸಲಹೆಯಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೊಸೂರು ಗಿರೀಶ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಟ್ಟಡ ಪ್ರಭಾಕರ್, ಬೆಳ್ಯನ ಚಂದ್ರಪ್ರಕಾಶ್, ಸವಿತ ಆಚಾರ್ಯ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಚೊಕ್ಕಾಡಿ ಅಪ್ಪಯ್ಯ, ಕಡ್ಲೇರ ತುಳಸಿ ಮೋಹನ್, ಪಟ್ಟಡ ಚಿಣ್ಣಪ್ಪ (ಅಶೋಕ), ಶಿಕ್ಷಕಿ ಬೆಳ್ಯನ ತಿಲಾಕ್ಷಿ, ಪರಿಚನ ವಿಮಲಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅವಂದೂರು ಗ್ರಾಮದ ನಿವಾಸಿಗಳು ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಕಡ್ಯದ ದಯಕುಮಾರ್, ಚೊಕ್ಕಾಡಿ ಸುರೇಶ್, ಪಟ್ಟಡ ಶಿವಕುಮಾರ್, ಗೋಪಾಲಕೃಷ್ಣ ಯುವ ಸಂಘ ಹಾಗೂ ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ಪಟ್ಟಡ ಪ್ರಭಾಕರ್ ಮತ್ತು ಅವಂದೂರು ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಪರಿಚನ ವಿಮಲಾವತಿ ಅವರನ್ನು ಸನ್ಮಾನಿಸಲಾಯಿತು.