ಕುಶಾಲನಗರ, ಸೆ. 1: ಕೋಯಮತ್ತೂರಿನ ಇಶಾ ಪೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ನದಿಗಳ ಸಂರಕ್ಷಣೆ ಆಂದೋಲನದ ಅಂಗವಾಗಿ ಕುಶಾಲನಗರದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಕುಶಾಲನಗರದ ವೈದ್ಯರಾದ ಡಾ.ಅಮಿತಾ ಕುಡೆಕಲ್ಲು ನೇತೃತ್ವದ ತಂಡ ಕೊಪ್ಪ ಕಾವೇರಿ ಸೇತುವೆ ಬಳಿ ನದಿಗಳ ಸಂರಕ್ಷಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ತಂಡದ ಸದಸ್ಯರು ನೀಲಿ ಬಣ್ಣದ ಸಮವಸ್ತ್ರ ಧರಿಸಿ ಹೆದ್ದಾರಿ ಬದಿಯಲ್ಲಿ ನೀರಿಲ್ಲದಿದ್ದರೆ ಜೀವನವಿಲ್ಲ ಎಂಬ ಭಿತ್ತಿಚಿತ್ರವನ್ನು ಹಿಡಿದು ನಶಿಸುತ್ತಿರುವ ಜಲಮೂಲಗಳನ್ನು ಸಂರಕ್ಷಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಿದರು.

ತಂಡದಲ್ಲಿ ಮಂಜುಳಾ, ಮುಕ್ಕಾಟಿರ ಅಚ್ಚಯ್ಯ, ಸಚಿನ್, ನವ್ಯ, ಆಶಿಶ್, ಆಯುಷ್, ಪ್ರತಿಮ, ಹೇಮ ಮತ್ತಿತರರು ಇದ್ದರು.