ಶ್ರೀಮಂಗಲ, ಸೆ. 1: ಜನರಲ್ ಕೊಡಂದೇರ ತಿಮ್ಮಯ್ಯ ಸಾಹಸ ಕ್ರೀಡಾ ಅಕಾಡೆಮಿಯ ಆಶ್ರಯದಲ್ಲಿ ಟಿ.ಶೆಟ್ಟಿಗೇರಿ ಸಮೀಪದ ಕೆ.ಕೆ.ಆರ್.ನಲ್ಲಿರುವ ಕಕ್ಕಟ್ಟ್ ಹೊಳೆಯಲ್ಲಿ ಹಲವು ವರ್ಷಗಳಿಂದ ಸ್ಥಾಪಿತವಾಗಿರುವ ಜನರಲ್ ಕೊಡಂದೇರ ತಿಮ್ಮಯ್ಯ ಜಲ ಸಾಹಸ ಕ್ರೀಡಾ ತರಬೇತಿ ಕೇಂದ್ರದಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಸಾಹಸ ಜಲಕ್ರೀಡಾ ಶಿಬಿರ ಏರ್ಪಡಿಸಲಾಗಿದೆ.

ಆಗಸ್ಟ್ 31 ರಿಂದ ಆರಂಭಗೊಂಡು ತಾ. 2ರಂದು ಮಧ್ಯಾಹ್ನದವರೆಗೆ ನಡೆಯಲಿದ್ದು, ಅಪರಾಹ್ನ 2 ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಶಿಬಿರದ ಉಸ್ತುವಾರಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಮಂದೇಯಂಡ ವನಿತ್ ಕುಮಾರ್ ತಿಳಿಸಿದ್ದಾರೆ.