ಮಡಿಕೇರಿ, ಸೆ.1 : ಬಿಜೆಪಿಯ ಹಿರಿಯ ಮುಖಂಡ ಕೋಡಿ ಪೆÀÇನ್ನಪ್ಪ ಅವರನ್ನು ಜಿಲ್ಲಾ ಬಿಜೆಪಿಯ ಪ್ರಮುಖರು ಹಾಗೂ ಕೆಲವು ನೂತನ ಕಾರ್ಯಕರ್ತರು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯ ಕರಿಕೆ ಸ್ಥಾನೀಯ ಸಮಿತಿ ಪ್ರಮುಖರು, ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಪೆÀÇನ್ನಪ್ಪ ಅವರಿಗೆ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಾನೀಯ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ.ಕೆ.ದಯಾನಂದ, ಪಕ್ಷದ ಬೆಳವಣಿಗೆಗೆ ಮತ್ತು ಕರಿಕೆ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ ಕೋಡಿ ಪೆÀÇನ್ನಪ್ಪ ಅವರನ್ನು ಇತ್ತೀಚೆಗಷ್ಟೆ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಮಂದಿ ನಿರ್ಲಕ್ಷ್ಯ ಮನೋಭಾವದಿಂದ ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಈ ಹಿಂದೆ ಎಸ್.ಜಿ.ಮೇದಪ್ಪ ಅವರ ಸೋಲಿಗೆ ಯಾರು ಕಾರಣ ಎಂದು ಆತ್ಮಾವಲೋಕನ ಮಾಡಿಕೊಂಡರೆ ಪಕ್ಷದ ಇಂದಿನ ಸ್ಥಿತಿಗೆ ಸಾಕ್ಷಿ ಸಿಗುತ್ತದೆ ಎಂದು ದಯಾನಂದ ತಿಳಿಸಿದರು. ಬಿಜೆಪಿ ನಮ್ಮನ್ನು ಕಡೆ ಗಣಿಸಿದರೂ ನಾವು ಬಿಜೆಪಿಯೊಂದಿಗೇ ಇದ್ದು ಕೋಡಿ ಪೆÀÇನ್ನಪ್ಪ ಅವರ ಕೈಯನ್ನು ಬಲಪಡಿಸುವದಾಗಿ ಸ್ಪಷ್ಟಪಡಿಸಿದರು. ಹಿರಿಯರನ್ನು ಕಡೆಗಣಿಸುವ ಮನೋಭಾವ ಹೀಗೆಯೇ ಮುಂದುವರೆದರೆ ಪಕ್ಷಕ್ಕೆ ಇನ್ನಷ್ಟು ಹಿನ್ನಡೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬಿ.ಬಿ.ಪ್ರದೀಪ್ ಕುಮಾರ್, ಕೆ.ಬಿ. ನಾರಾಯಣ, ಕೆ.ಕೆ.ಪುರುಷೋತ್ತಮ, ಸತೀಶ್ ಹಾಗೂ ಬಿ.ಸಿ.ಶೇಷಪ್ಪ ಉಪಸ್ಥಿತರಿದ್ದರು.