ವೀರಾಜಪೇಟೆ, ಸೆ. 1: ವೀರಾಜಪೇಟೆಯ ಪಟ್ಟಣ ಪಂಚಾಯಿತಿಯಿಂದ ಗೌರಿ ಗಣೇಶೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ವಿವಿಧ ಕ್ಷೇತ್ರದಲ್ಲಿ ದುಡಿದ 5 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.
ಅಂತರಾಷ್ಟ್ರೀಯ ಹಾಕಿ ಆಟಗಾರ ಐತಿಚಂಡ ಪೂವಯ್ಯ ಅಂತರಾಷ್ಟ್ರೀಯ ಮಹಿಳಾ ತೀರ್ಪುಗಾರ್ತಿ ಅನುಪಮ, ಪಟ್ಟಣದ ಸ್ವಚ್ಚತೆ ಹಾಗೂ ಬಯಲು ಮುಕ್ತ ಶೌಚಾಲಯದಲ್ಲಿ ಪ್ರಶಸ್ತಿ ಪಡೆಯಲು ಕಾರಣರಾದ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಪಟ್ಟಣದ ಸ್ವಚ್ಛತೆಯಲ್ಲಿ ವಿಶೇಷ ಕಾಳಜಿ ಹೊಂದಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯಾಧಿಕಾರಿ ವೇಲ್ ಮುರುಗನ್ ಹಾಗೂ ಫುಟ್ಬಾಲ್ ಕ್ರೀಡಾಪಟು ಹಾಗೂ ಇಲ್ಲಿನ ಆಕ್ಷಫರ್ಡ್ ಫುಟ್ಬಾಲ್ ಅಸೋಸಿಯೇಶನ್ನ ಅಧ್ಯಕ್ಷ ರ್ಯಾನ್ಸಿ ವರ್ಗೀಸ್ ಅವರನ್ನು ಸನ್ಮಾನಿಸಲಾಯಿತು.
ಇಲ್ಲಿನ ತಾಲೂಕು ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು.