ಮಡಿಕೇರಿ, ಆ. 31: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ 2016-17ನೇ ಸಾಲಿನ ವಿಶೇಷ ಸಂಗೀತ ನೃತ್ಯ ಪರೀಕ್ಷೆಯ ಸೀನಿಯರ್ ವಿಭಾಗದಲ್ಲಿ ಶೇ. 88 ಅಂಕಗಳಿಸಿ ಹರ್ಷಿತ ಎಂ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಮಡಿಕೇರಿಯ ಗುಂಡೂರಾವ್ ಬಡಾವಣೆಯ ಪ್ರಾಧ್ಯಾಪಕ ಎಂ.ಎಸ್. ಮಧುಸೂದÀನ್‍ರಾವ್-ಮಮತಾ ದಂಪತಿಗಳ ಪುತ್ರಿ. ಭಾರತೀಯ ವಿದ್ಯಾಭವನ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಯಾಗಿದ್ದಾಳೆ.

ಶೇ. 824 ಅಂಕಗಳೊಂದಿಗೆ ಮೇಘನ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಈಕೆ ನಗರದ ದಿ. ಶಿವಶಂಕರಾಚಾರ್-ಮಂಗಳಾ ದಂಪತಿಗಳ ಪುತ್ರಿ ಹಾಗೂ ನಗರದ ಸರಕಾರಿ ಪದವಿ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ.

ವಿಶೇಷ ಸಂಗೀತ ನೃತ್ಯ ಪರೀಕ್ಷೆಯ ಜೂನಿಯರ್ ವಿಭಾಗ ದಲ್ಲಿ ಶೇ. 94.25 ಅಂಕಗಳೊಂದಿಗೆ ತನುಷ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಈಕೆ ನಗರದ ಕೆ.ಇ. ಗಣಪತಿ ಹಾಗೂ ವಾಣಿ ದಂಪತಿಗಳ ಪುತ್ರಿ. ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.

ಜೂನಿಯರ್ ವಿಭಾಗದ ಶಾಸ್ತ್ರ ವಿಭಾಗದಲ್ಲಿ ಎಂ. ಕೀರ್ತನ ಶೇ. 100 ಅಂಕಗಳಿಸಿ ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಈಕೆ ಗುಂಡೂರಾವ್ ಬಡಾವಣೆಯ ಪ್ರಾಧ್ಯಾಪಕ ಮಧುಸೂದನ್ ರಾವ್-ಮಮತಾ ದಂಪತಿಗಳ ಪುತ್ರಿ. ಭಾರತೀಯ ವಿದ್ಯಾಭವನ ಕೆ.ವಿ.ಕೆ. ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಈ ನಾಲ್ವರು ನಗರದ ನಾಟ್ಯನಿಕೇತನ ಸಂಸ್ಥೆಯ ಗುರು ವಿನಯ ಕೃಷ್ಣಮೂರ್ತಿ ಅವರ ಶಿಷ್ಯೆಯರಾಗಿದ್ದಾರೆ.

ಕುಶಾಲನಗರ: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಆಶ್ರಯದಲ್ಲಿ 2017ನೇ ಸಾಲಿನಲ್ಲಿ ನಡೆದ ಭರತನಾಟ್ಯಂ ಜೂನಿಯರ್ ಪರೀಕ್ಷೆಯಲ್ಲಿ ಕುಶಾಲನಗರದ ಫಾತಿಮಾ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಯು.ಎನ್. ಮಯೂರಿ ಶೇ 95 ಅಂಕಗಳಿಸಿ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಕೆ.ವೈ. ಧನ್ಯ ಶೇ. 84 ಅಂಕಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ, ಭರತನಾಟ್ಯ ಪೂರ್ವ ವಿದ್ವತ್‍ನಲ್ಲಿ ಕೆ.ಎಂ. ನಮೃತಾ ಶೇ.64 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕುಶಾಲನಗರ ಕಾವೇರಿ ಕಲಾ ಪರಿಷತ್ ವಿದ್ಯಾರ್ಥಿಗಳಾದ ಇವರು ನೃತ್ಯ ವಿಧುಷಿ ವಾಣಿ ಯಶವಂತ್ ಶಿಷ್ಯೆಯರಾಗಿದ್ದು, ಮಯೂರಿ ಕುಶಾಲನಗರ ಉ.ರಾ. ನಾಗೇಶ್ ದಂಪತಿಗಳ ಪುತ್ರಿಯಾಗಿದ್ದಾಳೆ. ಕೆ.ವೈ. ಧನ್ಯ ಕುಶಾಲನಗರದ ಕೆ.ಬಿ. ಯಶವಂತ್ ದಂಪತಿಗಳ ಪುತ್ರಿಯಾಗಿದ್ದು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕೆ.ಎಂ. ನಮೃತಾ ಕೂಡುಮಂಗಳೂರಿನ ಮುನಿಕುಮಾರ್ ದಂಪತಿಗಳ ಪುತ್ರಿ ಹಾಗೂ ಈಕೆ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ.