ಮಡಿಕೇರಿ, ಆ. 21: ಲಯನ್ಸ್ ಕ್ಲಬ್ ಸಂಪಾಜೆಯಿಂದ ಅಲ್ಲಿನ ಸರಕಾರಿ ಪ್ರೌಢಶಾಲೆ ಚೆಂಬುವಿನಲ್ಲಿ ವನವಹೋತ್ಸವದೊಂದಿಗೆ ಔಷಧೀಯ ಸಸ್ಯಗಳನ್ನು ನೆಡಲಾಯಿತು.

ಕ್ಲಬ್‍ನ ಅಧ್ಯಕ್ಷೆ ಹಾಗೂ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾಲೇಜಿನ ಉಪನ್ಯಾಸಕಿ ಅಮೃತಾ ಅಪ್ಪಣ್ಣ ಗಿಡಗಳ ಉಪಯೋಗಗಳು ಹಾಗೂ ತುಳಸಿ ಗಿಡಗಳು ಪರಿಸರಕ್ಕೆ ಶುದ್ಧ ಆಮ್ಲಜನಕವನ್ನು ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನೆರೆದವರಿಗೆ ತುಳಸಿ ಗಿಡಗಳನ್ನು ವಿತರಿಸಲಾಯಿತು.

ಇದೇ ಸಂದರ್ಭ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕಾರ್ಯದರ್ಶಿ ವಾಸುದೇವ ಕಟ್ಟೆಮನೆ, ಖಜಾಂಚಿ ಲೆಸ್ಸಿ ಸಿಲ್ವೆಸ್ಟರ್ ಸದಸ್ಯರುಗಳಾದ ಅಪ್ಪಣ್ಣ, ಸಚಿತ್ ರೈ, ಸಂದ್ಯಾ ಸಚಿತ್ ರೈ, ನವೀನ್‍ಚಂದ್ರ, ಧನಲಕ್ಷ್ಮಿ ನವೀನ್, ಪ್ರಶಾಂತ್, ತಾಜ್ ಮಹಮ್ಮದ್, ಕಿಶೋರ್ ಪಿ.ಬಿ, ಸುರೇಶ್, ವೆಂಕಪ್ಪ ಮಾಸ್ಟರ್, ಶಾಲಾ ಮುಖ್ಯ ಶಿಕ್ಷಕಿ, ದೇಜಮ್ಮ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ ಹಾಗೂ ಶಿಕ್ಷಕ್ ವೃಂದದವರು ಭಾಗವಹಿಸಿದ್ದರು.