ಸಿದ್ದಾಪುರ, ಜು. 7: ಕರಡಿಗೋಡು ಗ್ರಾಮದ ಮತಗಟ್ಟೆಯಲ್ಲಿ ಸಿದ್ದಾಪುರ ಶಕ್ತಿ ಕೇಂದ್ರದ ಬಿಜೆಪಿ ವಿಸ್ತಾರಕರ ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಭಾರತೀಶ್ ಚಾಲನೆ ನೀಡಿದರು

ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಲೋಕೇಶ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಪ್ಪ, ವೀರಾಜಪೇಟೆ ಫೆಡರೇಶನ್ ಉಪಾದ್ಯಕ್ಷ ಮಧು ದೇವಯ್ಯ, ಸಿದ್ದಾಪುರ ಬಿಜಿಪಿ ಸ್ಥಾನೀಯ ಸಮಿತಿ ಅಧ್ಯಕ್ಷ ನಾಣಯ್ಯ, ಪ್ರಮುಖ ಪ್ರಭಾಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು