*ಗೋಣಿಕೊಪ್ಪಲು, ಜೂ. 22: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತಾ.23ರಂದು ಮಧ್ಯಾಹ್ನ 1ಗಂಟೆಗೆ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಲಿದೆ.

ನೀತು ನಿನಾದ್ ಮತ್ತು ಕುಮಾರ್ ತಂಡದವರಿಂದ ಕರ್ನಾಟಕ ಸಂಗೀತ, ಮಂಜುಳಾ, ಮಂಗಳಂ ತಂಡದ ವರಿಂದ ಹಿಂದೂಸ್ಥಾನಿ ಗಾಯನ, ನವೀನ ಮತ್ತು ತಂಡದವರಿಂದ ಸಮೂಹ ನೃತ್ಯ, ಸಚಿನ್, ಉಮೇಶ್ ತಂಡದವರಿಂದ ಕಥಾ ಕೀರ್ತನೆ, ಸುಮುಖ್ ಆರ್ ಪ್ರಸಾದ್ ಅವರಿಂದ ಸುಗಮ ಸಂಗೀತ, ವಿಕಾಸ್ ತಂಡದವರಿಂದ ಸಾಮೂಹಿಕ ನಾಟಕ, ಗಣೇಶ್ ತಂಡದವರಿಂದ ಜನಪದ ನೃತ್ಯ ಕಂಸಾಳೆ,ಗಂಗಾಧರ್ ತಂಡದವರಿಂದ ಡೊಳ್ಳು ಕುಣಿತ, ಇಂದಿರಾ, ಜೆ.ಕೆ.ರಾಮು ತಂಡದವರದಿಂದ ನೃತ್ಯ, ಷಡಕ್ಷರಯ್ಯ,ಕೆ.ಚಂದ್ರಶೇಖರ್ ತಂಡದವರಿಂದ ಜನಪದ ಗೀತಗಾಯನ ನಡೆಯಲಿದೆ.

ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಸಿ.ಎಸ್.ಕೃಷ್ಣ ಗಣಪತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸೊಸೈಟಿ ಉಪಾಧ್ಯಕ್ಷ ಕಾಡ್ಯಮಾಡ ಉದಯ ಉತ್ತಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್.ಪೃಥ್ಯು, ತಾಲೂಕು ಪಂಚಾಯಿತಿ ಸದಸ್ಯೆ ಎಂ.ಬಿ.ಸುನಿತಾ, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂಡೇರ ಕುಸುಮಾ ಶೇಖರ್, ಉಪನ್ಯಾಸಕ ಡಾ.ಜೆ.ಸೋಮಣ್ಣ ತಿತಿಮತಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಜೆ.ಕೆ.ರಾಮು ಪಾಲ್ಗೊಳ್ಳಲಿದ್ದಾರೆ.