ಸಿದ್ದಾಪುರ, ಜೂ. 22: ಫಲಾನುಭವಿಗಳು ತಮಗೆ ದೊರೆತ ಹಕ್ಕು ಪತ್ರವನ್ನು ಮಾರಾಟ ಮಾಡದಂತೆ ಶಾಸಕ ಕೆ.ಜಿ. ಬೋಪಯ್ಯ ಅವರು ಕರೆ ನೀಡಿದ್ದಾರೆ.ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ತಲತಲಾಂತರಗಳಿಂದ ವಾಸ ಮಾಡಿಕೊಂಡು ಬಂದಿರುವ ಪರಿಶಿಷ್ಟ ವರ್ಗದ 13 ಕುಟುಂಬಗಳಿಗೆ ಹಕ್ಕು ಪತ್ರವನ್ನು ವಿತರಿಸಿ ಮಾತನಾಡಿದರು. 2005ರ ಅರಣ್ಯಹಕ್ಕು ಕಾಯ್ದೆಯಡಿ ಯಲ್ಲಿ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುವ ಪರಿಶಿಷ್ಟ ಜಾತಿ ಪಂಗಡದ ಜನಾಂಗದವರಿಗೆ ಸರಕಾರವು ಹಕ್ಕುಪತ್ರವನ್ನು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ನೀಡಲಾಗುತ್ತಿದೆ. ಈ ಹಕ್ಕುಪತ್ರವನ್ನು ಯಾರಿಗೂ ಪರಬಾರೆ ಮಾಡದಂತೆ ಕೆ.ಜಿ. ಬೋಪಯ್ಯ ತಿಳಿಸಿದರು. ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ವಾಸಮಾಡಿಕೊಂಡಿರುವ ಕುಟುಂಬಗಳಿಗೆ ಸರಕಾರವು 75 ವರ್ಷಗಳ ದಾಖಲೆಗಳನ್ನು ಕೇಳುತ್ತಿದ್ದು, 13 ದಾಖಲೆಗಳ ಪೈಕಿ ಯಾವದಾದರು ಒಂದನ್ನು ನೀಡುವಂತೆ ಸಿದ್ದಾಪುರ, ಜೂ. 22: ಫಲಾನುಭವಿಗಳು ತಮಗೆ ದೊರೆತ ಹಕ್ಕು ಪತ್ರವನ್ನು ಮಾರಾಟ ಮಾಡದಂತೆ ಶಾಸಕ ಕೆ.ಜಿ. ಬೋಪಯ್ಯ ಅವರು ಕರೆ ನೀಡಿದ್ದಾರೆ.

ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ತಲತಲಾಂತರಗಳಿಂದ ವಾಸ ಮಾಡಿಕೊಂಡು ಬಂದಿರುವ ಪರಿಶಿಷ್ಟ ವರ್ಗದ 13 ಕುಟುಂಬಗಳಿಗೆ ಹಕ್ಕು ಪತ್ರವನ್ನು ವಿತರಿಸಿ ಮಾತನಾಡಿದರು. 2005ರ ಅರಣ್ಯಹಕ್ಕು ಕಾಯ್ದೆಯಡಿ ಯಲ್ಲಿ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುವ ಪರಿಶಿಷ್ಟ ಜಾತಿ ಪಂಗಡದ ಜನಾಂಗದವರಿಗೆ ಸರಕಾರವು ಹಕ್ಕುಪತ್ರವನ್ನು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ನೀಡಲಾಗುತ್ತಿದೆ. ಈ ಹಕ್ಕುಪತ್ರವನ್ನು ಯಾರಿಗೂ ಪರಬಾರೆ ಮಾಡದಂತೆ ಕೆ.ಜಿ. ಬೋಪಯ್ಯ ತಿಳಿಸಿದರು. ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ವಾಸಮಾಡಿಕೊಂಡಿರುವ ಕುಟುಂಬಗಳಿಗೆ ಸರಕಾರವು 75 ವರ್ಷಗಳ ದಾಖಲೆಗಳನ್ನು ಕೇಳುತ್ತಿದ್ದು, 13 ದಾಖಲೆಗಳ ಪೈಕಿ ಯಾವದಾದರು ಒಂದನ್ನು ನೀಡುವಂತೆ ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳನ್ನು ಮಾತ್ರ ದೂರುವದು ಸರಿಯಲ್ಲ ಎಂದರು.

ಮಡಿಕೇರಿ ವಲಯ ಡಿ.ಎಫ್.ಓ. ಸೂರ್ಯಸೇನ್ ಮಾತನಾಡಿ, ಅರಣ್ಯ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಒಡನಾಟ ಇಟ್ಟುಕೊಂಡಿರುವ ನಿವಾಸಿಗಳು ಕಾಡನ್ನು ಸಂರಕ್ಷಣೆ ಮಾಡುವದರೊಂದಿಗೆ ತಮ್ಮ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಅಭಿವೃದ್ಧಿ ಹೊಂದು ವಂತೆ ಕಿವಿಮಾತು ಹೇಳಿದರು. ಅಲ್ಲದೇ ಅರಣ್ಯದಲ್ಲಿ ಕುಡಿಯುವ ನೀರನ್ನು ಕಲುಷಿತಗೊಳಿಸದಂತೆ ತಿಳಿಸಿದರು.

ಇದೇ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ ಅರಣ್ಯ ಪ್ರದೇಶದಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ರಾಣಿ, ಉಪಾಧ್ಯಕ್ಷ ರಾಜು, ಗ್ರಾ.ಪಂ. ಸದಸ್ಯರಾದ ಅಜ್ಜಿನಿಕಂಡ ರಘು ಕರುಂಬಯ್ಯ, ಸತೀಶ್, ವಾರಿಜ, ಪಿ.ಡಿ.ಓ ರಾಜೇಶ್, ಐ.ಟಿ.ಡಿ.ಪಿ ಇಲಾಖಾಧಿಕಾರಿ ಚಂದ್ರಶೇಖರ್, ಲೋಹಿತ್, ಆರ್.ಎಂ.ಸಿ. ಸದಸ್ಯ ಮೋಹನ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಈಶ್ವರ ಸ್ವಾಗತಿಸಿ, ಕಿರಣ್ ವಂದಿಸಿದರು.

-ವಾಸು ಆಚಾರ್ಯ