ಮಡಿಕೇರಿ, ಜೂ. 21: ಮಡಿಕೇರಿ ತಾಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕಾವೇರಿ ಕಲಾಕ್ಷೇತ್ರದಲ್ಲಿನ ಅಂಬಳೆ ಸುಬ್ಬರಾವ್ ವೇದಿಕೆಯಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಪ್ರಸ್ತುತಪಡಿಸಲಾದ ‘ವೀರ ಚರಿತ್ರೆ’ ರೂಪಕ ನೆರೆದಿದ್ದ ಕಲಾಭಿಮಾನಿ ಗಳನ್ನು ಭಾವುಕರನ್ನಾಗಿಸಿತು. ವೀರ ಯೋಧನ ದೇಶಾಭಿಮಾನ, ಶೌರ್ಯ, ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಸನ್ನಿವೇಶ, ಆತನ ಕುಟುಂಬ ಅನುಭವಿಸುವ ಯಾತನೆಯ ಕಥಾಹಂದರದ ರೂಪಕ ನೆರೆದಿದ್ದವರ ಮನದಲ್ಲಿ ದೇಶಾಭಿಮಾನ ಮೂಡಿಸಿತ್ತಲ್ಲದೆ, ಪ್ರಶಂಸೆ ಗಿಟ್ಟಿಸಿಕೊಂಡಿತು.

ಇನ್ನುಳಿದಂತೆ ವಿದುಷಿ ರೂಪಾ ಉಪಾಧ್ಯಾಯ, ವಿನಯ ಕೃಷ್ಣಮೂರ್ತಿ ಅವರುಗಳ ಮಾರ್ಗದರ್ಶನದಲ್ಲಿ ಮೂಡಿಬಂದ ಭರತನಾಟ್ಯ, ಶಾಸ್ತ್ರೀಯ ನೃತ್ಯ ಪ್ರಾಕಾರಗಳು ಕಲಾಸಕ್ತರನ್ನು ಮುದಗೊಳಿಸಿದವು.

ನೆಲ್ಲಕ್ಕಿ ಯುವತಿ ಮಂಡಳಿ, ಕೊಡಗು ಗೌಡ ಮಹಿಳಾ ಒಕ್ಕೂಟ, ಜ. ತಿಮ್ಮಯ್ಯ ಪ್ರೌಢಶಾಲೆ, ಲಿಟ್ಲ್‍ಫ್ಲವರ್ ವಿದ್ಯಾಸಂಸ್ಥೆ, ರಾಣಿ ಮಾಚಯ್ಯ ನೇತೃತ್ವದ ತಂಡಗಳು ಪ್ರದರ್ಶಿಸಿದ ಸಂಸ್ಕøತಿಯನ್ನು ಬಿಂಬಿಸುವ ನೃತ್ಯಗಳು ಗಮನ ಸೆಳೆದವು. ಜ್ಞಾನ ಸಂಗಮ ತಂಡದ ಕಲಾವಿದರು ಜಾನಪದ ಗೀತೆ ಹಾಡಿ ರಂಜಿಸಿದರು.

ಉದ್ಘಾಟನೆ: ಕಾರ್ಯಕ್ರಮವನ್ನು ಕಲಾವಿದರು, ಶಕ್ತಿ ಪತ್ರಿಕೆ ಸಂಪಾದಕರೂ ಆದ ಜಿ. ಚಿದ್ವಿಲಾಸ್ ಉದ್ಘಾಟಿಸಿದರು. ಜ್ಞಾನ ದೀವಿಗೆ ಬೆಳಗಲಿ, ಸಂಸ್ಕøತಿ ಬಾಳಿಗೆ ಬೆಳಕಾಗಲಿ ಎಂದು ಶುಭ ಹಾರೈಸಿದರು. ಅತಿಥಿಗಳಾಗಿದ್ದ ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಕನ್ನಡ ಪರ ಹಾಗೂ ಸಂಸ್ಕøತಿಯನ್ನು ಬಿಂಬಿಸುವ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಸಂಸ್ಕøತಿಯ ತವರೂರೆಂದು ಕರೆಸಿಕೊಳ್ಳುವ ನಾಡಿನಲ್ಲಿ ಸಾಂಸ್ಕøತಿಕ ಚಟುವಟಿಕೆಗಳಿಲ್ಲ, ಸರಿಯಾದ ಕಲಾಮಂದಿರ ವಿಲ್ಲದಿರುವದು ನಾಚಿಕೆಕೇಡು ಎಂದು ಕಲಾಕ್ಷೇತ್ರದ ಪರಿಸ್ಥಿತಿಯನ್ನು ಉದಾಹರಿಸಿದರು. ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕೆಂದರು.

ಸಮ್ಮೇಳನಾಧ್ಯಕ್ಷ ಬಿ.ಎ. ಷಂಶುದ್ದೀನ್, ನಗರಸಭಾ ಸದಸ್ಯೆ ಲಕ್ಷ್ಮಿ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಇದ್ದರು.

ಕಸಾಪ ನಿರ್ದೇಶಕಿ ಪರ್ಲಕೋಟಿ ಸುನಿತಾ ಪ್ರೀತು ನಿರೂಪಿಸಿದರೆ, ಸಹೋದರಿಯರು ಪ್ರಾರ್ಥಿಸಿದರು. ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ಭಾರತಿ ರಮೇಶ್ ಸ್ವಾಗತಿಸಿದರೆ, ಕಸಾಪ ನಿರ್ದೇಶಕಿ ತೆಕ್ಕಡೆ ಪೂರ್ಣಿಮ ಬಸಪ್ಪ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮವನ್ನು ಕಲಾವಿದ ಆರ್.ಬಿ. ರವಿ ನಿರ್ವಹಿಸಿದರು.

ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮವನ್ನು ಕಲಾವಿದ ಆರ್.ಬಿ. ರವಿ ನಿರ್ವಹಿಸಿದರು.