ಮಡಿಕೇರಿ, ಜೂ. 5: ಮುಂಗಾರು ಮಳೆಯ ಆರಂಭದೊಂದಿಗೆ ಮೀನು ಮರಿ ಉತ್ಪಾದನಾ ಅವಧಿಯೂ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ ಸ್ವಂತ ಕೆರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಮೀನು ಕೃಷಿ ನಡೆಸುತ್ತಿರುವವರು, ಮೀನು ಕೃಷಿಕರು ವಿವಿಧ ತಳಿಯ ಮೀನು ಮರಿಗಳಿಗಾಗಿ ಆಯಾ ತಾಲೂಕು ಮೀನುಗಾರಿಕೆ ಕಚೇರಿಗಳಲ್ಲಿ ಬೇಡಿಕೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತಾಲೂಕು ಸಹಾಯಕ ನಿರ್ದೇಶಕರುಗಳನ್ನು ಸಂಪರ್ಕಿಸಲು ಕೋರಿದೆ.
ಮಡಿಕೇರಿ 08272-222801, ಸೋಮವಾರಪೇಟೆ 08276-281052, ವೀರಾಜಪೇಟೆ 08274-261477, ಹಾರಂಗಿ 9480701088ನ್ನು ಸಂಪರ್ಕಿಸಬಹುದು.