ಮಡಿಕೇರಿ, ಜೂ. 5: ಸ್ವಚ್ಛ ಕಾವೇರಿ- ಸ್ವಚ್ಛ ಪರಿಸರಕ್ಕಾಗಿ ನಡಿಗೆ ಎಂಬ ಘೋಷಣೆಯಡಿ ವಿಶ್ವ ಪರಿಸರ ದಿನ ಅಂಗವಾಗಿ ಇಂದು ಕಾಲ್ನಡಿಗೆ ಜಾಥಾ ವೇಳೆ ನದಿ ತೀರಗಳು ಸಂಸ್ಕøತಿಗಳ ಉಗಮ ಸ್ಥಾನ. ಭಾರತ ದೇಶದಲ್ಲಿ ನದಿಗೆ ತಾಯಿ, ದೇವತೆಯ ಸ್ಥಾನ ನೀಡಿ ಪೂಜಿಸಲಾಗುತ್ತಿದೆ ಎಂದು ಸಂದೇಶ ರವಾನಿಸಲಾಯಿತು.ದಕ್ಷಿಣ ಭಾರತದ ಕೋಟ್ಯಾಂತರ ಜನ, ಜಾನುವಾರುಗಳಿಗೆ ಜೀವ ಜಲವಾಗಿರುವ ಕಾವೇರಿ ನದಿ ಸಪ್ತ ನದಿಗಳಲ್ಲಿ ಒಂದಾಗಿದೆ. ಜನ,

(ಮೊದಲ ಪುಟದಿಂದ) ಜಾನುವಾರುಗಳಿಗೆ ಜೀವನದಿಯಾಗಿ ರುವ ಕಾವೇರಿ ತನ್ನ ಒಡಲಿನಲ್ಲಿ ಬಹುತೇಕ ಕಲುಷಿತಗೊಂಡಿರುವ ದೃಶ್ಯ ಕೊಡಗು ಜಿಲ್ಲೆಯ ಮೂಲದಿಂದಲೇ ಕಂಡುಬರುತ್ತಿದೆ ಎಂದು ಗಮನ ಸೆಳೆಯಲಾಯಿತು.

ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯದಿಂದ ಧರೆಯಲ್ಲಿ ಏರುಪೇರು ಉಂಟಾಗು ವದರೊಂದಿಗೆ ಉಪನದಿಗಳು ಮಾಯವಾಗುವದರೊಂದಿಗೆ ಪ್ರಮುಖ ನದಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಲಾಯಿತು.

ಅತಿಯಾಗಿ ಪ್ಲಾಸ್ಟಿಕ್ ಬಳಕೆಯೂ ಪರಿಸರ ಹಾಗೂ ಜೀವಜಲ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಪಾತ್ರೆ, ಬಟ್ಟೆ ತೊಳೆಯುವದರಿಂದಲೂ ಮತ್ತು ಕೃಷಿ ಚಚುವಟಿಕೆಗಳಿಂದ ಹೊರಹೊಮ್ಮುವ ರಾಸಾಯನಿಕಗಳು ನೇರವಾಗಿ ನದಿ ಒಡಲು ಸೇರುತ್ತಿದೆ. ಕಾವೇರಿ ತಟದಲ್ಲಿರುವ ಧಾರ್ಮಿಕ ಕೇಂದ್ರಗಳ ತ್ಯಾಜ್ಯಗಳು ಕೂಡ ನೇರವಾಗಿ ನದಿ ಒಡಲು ಸೇರುತ್ತಿರುವದು ಆಕ್ಷೇಪಾರ್ಹ. ನದಿ ತಟಗಳ ಗ್ರಾಮ, ಪಟ್ಟಣಗಳ ಕಲುಷಿತ ನೀರು ನೇರವಾಗಿ ನದಿ ಸೇರುತ್ತಿರು ವದು ಮಾಲಿನ್ಯಕ್ಕೆ ಕಾರಣವಾಗಿದೆ. ಈ ಮೂಲಕ ನದಿ ನೀರು ಸಂಪೂರ್ಣ ಮಾಲಿನ್ಯಗೊಳ್ಳುವದ ರೊಂದಿಗೆ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇದರಿಂದಾಗಿ ಜಲಚರಗಳು ನಶಿಸುವದಲ್ಲದೆ ರೋಗ ರುಜಿನಗಳು ಹಬ್ಬುವ ಸಾಧ್ಯತೆಯಿದ್ದು, ವ್ಯವಸಾಯಕ್ಕೂ ಕುತ್ತು ಉಂಟಾಗುತ್ತಿದೆ. ಶತಮಾನಗಳ ಕಾಲದಿಂದಲೂ ತನ್ನ ಪಾವಿತ್ರ್ಯತೆಗೆ ಮತ್ತು ಶುದ್ಧತೆಗೆ ಹೆಸರಾದ ಕಾವೇರಿ ನದಿ ಇತ್ತೀಚೆಗೆ ಬರಡಾಗುತ್ತಿದೆ ಎಂದು ನೆನಪಿಸುವ ಉದ್ದೇಶ ಈ ಜಾಥಾದಿಂದ ವ್ಯಕ್ತಗೊಂಡಿತು.

ನಿಸರ್ಗವನ್ನು ತಮ್ಮ ಬಯಕೆ ಗಳಿಗೆ ಈಡೇರಿಸಿಕೊಳ್ಳುವ ಸಂಪನ್ಮೂಲ ಎನ್ನುವಷ್ಟಕ್ಕೆ ಕಾವೇರಿ ನದಿಯನ್ನು ಹಾಗೂ ಪರಿಸರವನ್ನು ಸೀಮಿತವಾಗಿಸಿರುವದು ವಾತಾವರಣದ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡುವಂತಾಗಿರುವದು, ಕಾವೇರಿ ನದಿ ಹರಿಯುವ ವ್ಯಾಪ್ತಿಯಲ್ಲಿ ಪ್ರವಾಸಿಗರ ಒತ್ತಡ ಹೆಚ್ಚುವದರೊಂದಿಗೆ ತ್ಯಾಜ್ಯಗಳು ನೇರವಾಗಿ ನದಿಗೆ ಸೇರುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಈ ಮೂಲಕ ನದಿ ಬಹುತೇಕ ಮಲಿನಗೊಳ್ಳುತ್ತಿದ್ದು, ನದಿ ನೀರು ನೇರವಾಗಿ ಬಳಕೆಗೆ ಅಸಾಧ್ಯವೆನಿಸುವ ದೃಶ್ಯಗಳು ಕಂಡುಬರುತ್ತಿವೆ. ಕಾವೇರಿ ನದಿ ಮಲಿನಗೊಳ್ಳುವದನ್ನು ತಪ್ಪಿಸಲು ತಕ್ಷಣ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಅನಾಹುತಗಳನ್ನು ಎದುರಿಸಬೇಕಾಗುವದಂತೂ ನಿಶ್ಷಿತ ಎಂದು ಸಮಾಜವನ್ನು ಎಚ್ಚರಿಸಲಾಯಿತು.

ಜನ, ಜಾನುವಾರು, ಸಸ್ಯ ಸಂಕುಲಗಳಿಗೆ ಜೀವನಾಡಿಯಾಗಿರುವ ಕಾವೇರಿ ನದಿಯನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕಾಗಿದೆ ಎಂಬ ಸಂದೇಶಕ್ಕೆ ಕಾಲ್ನಡಿಗೆಯಲ್ಲಿ ಗಣ್ಯರೊಂದಿಗೆ ಯುವಜನಾಂಗ ಕೈ ಜೋಡಿಸುವ ಮೂಲಕ ಸಮಾಜದ ಗಮನ ಸೆಳೆಯಿತು.