ಮಡಿಕೇರಿ, ಜೂ. 5: ಕೊಡಗು ಗೌಡ ನಿವೃತ್ತ ನೌಕರರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿವಾರಣಾ ವಿಭಾಗ, ರೋಟರಿ ಮಿಸ್ಟಿಹಿಲ್ಸ್, ಮಡಿಕೇರಿಯ ವಿನೋದ್ ಮೆಡಿಕಲ್ಸ್, ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವುಗಳ ಸಹಯೋಗದೊಂದಿಗೆ ಮಕ್ಕಂದೂರು ಸಹಕಾರ ಸಂಘದ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ನೇತ್ರ ತಜ್ಞ ಡಾ. ಚೆರಿಯಮನೆ ಪ್ರಶಾಂತ್ ಶಿಬಿರ ಉದ್ಘಾಟಿಸಿ ನೇತ್ರ ತಪಾಸಣೆ ಮಾಡಿದರು. ಶಿಬಿರದಲ್ಲಿ ಒಟ್ಟು 134 ಮಂದಿ ತಪಾಸಣೆಗೆ ಒಳಗಾಗಿದ್ದು, ಈ ಪೈಕಿ 14 ಮಂದಿಗೆ ಉಚಿತ ಪೊರೆ ಚಿಕಿತ್ಸೆ ಹಾಗೂ 72 ಮಂದಿಗೆ ಉಚಿತ ಕನ್ನಡಕ ವಿತರಿಸಲು ಶಿಫಾರಸು ಮಾಡಲಾಯಿತು. 90 ಮಂದಿಗೆ ಉಚಿತವಾಗಿ ಔಷಧಿ ವಿತರಿಸ¯ Áಯಿತು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಂದೂರು ಗ್ರಾ.ಪಂ. ಅಧ್ಯಕ್ಷೆ ಲಕ್ಕಪ್ಪನ ಕಾವೇರಮ್ಮ, ಗೌಡ ಸಮಾಜದ ಅಧ್ಯಕ್ಷ ಕುಂಬುಗೌಡನ ಉತ್ತಪ್ಪ, ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ, ವಿನೋದ್ ಮೆಡಿಕಲ್ಸ್‍ನ ಅಂಬೆಕಲ್ ವಿನೋದ್ ಕುಶಾಲಪ್ಪ, ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪೂಳಕಂಡ್ರ ಸಂದೀಪ್, ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಖಜಾಂಚಿ ಪೊನ್ನಚನ ಸೋಮಣ್ಣ, ಕಾರ್ಯದರ್ಶಿ ಮೇಡ್ತನ ದೇವಕಿ, ಸಹಕಾರ್ಯದರ್ಶಿ ಕುದುಪಜೆ ಶಾರದ, ನಿರ್ದೇಶಕರುಗಳಾದ ದಂಬೆಕೋಡಿ ಆನಂದ, ಪಟ್ಟಡ ದೇವಯ್ಯ, ಪರಿವಾರ ಅಪ್ಪಾಜಿ, ಬೈತಡ್ಕ ಬೆಳ್ಯಪ್ಪ, ತಳೂರು ಕಾಳಪ್ಪ, ಕುಯ್ಯಮುಡಿ ವಸಂತ, ಚೆರಿಯಮನೆ ಪ್ರಮೋದ್, ಹೊಸೋಕ್ಲು ಪೊನ್ನಪ್ಪ, ಸೂದನ ಮೋಹಿನಿ ಇವರುಗಳು ಪಾಲ್ಗೊಂಡಿದ್ದರು.