ಮಡಿಕೇರಿ, ಮೇ 24: ಒಬ್ಬರು ಹಾಲಿ ಸಚಿವರು... ಮತ್ತೊಬ್ಬರು ಮಾಜಿ ಸಚಿವರು ಹಾಗೂ ಹಾಲಿ ಶಾಸಕರು. ಅದೂ ರಾಜಕೀಯವಾಗಿ ಪಕ್ಷವೂ ಬೇರೆ ಬೇರೆ. ಆದರೆ ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ದೂರ; ಜೊತೆಯಾಗಿ ಹೋಗೋಣ ಎಂಬ ತೀರ್ಮಾನ' ಮಡಿಕೇರಿ ನಗರಸಭೆ ವತಿಯಿಂದ ಕಸ ಸಂಗ್ರಹಿಸುವ 6 ಟಿಪ್ಪರ್ ವಾಹನಗಳಿಗೆ ಇಂದು ಚಾಲನೆ ನೀಡಿದ ಸಂದರ್ಭದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಸ್ವತಃ ವಾಹನ ಚಾಲನೆ ಮಾಡಿದರೆ ಪಕ್ಕದಲ್ಲಿ ಉಸ್ತುವಾರಿ ಸಚಿವ ಸೀತಾರಾಂ ಆಸೀನರಾಗಿ ಎಲ್ಲರ ಗಮನ ಸೆಳೆದರು.