ಮಡಿಕೇರಿ, ಮೇ 17: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾ ಮಂಡಳಿಯ ನಿರ್ದೇಶಕರಾಗಿ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿರುವ ಮಾಚಿಮಂಡ ಡಿ. ಸುವಿನ್ ಗಣಪತಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪಲು ಎಪಿಎಂಸಿ ಆಡಳಿತ ಮಂಡಳಿಗಳ ಪ್ರತಿನಿಧಿಯಾಗಿ ರಾಜ್ಯ ಮಹಾ ಮಂಡಳಿಗೆ ಸುವಿನ್ ಗಣಪತಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಇಂದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲೆಯ ಪ್ರಬಾರ ಕೃಷಿ ಸಹಾಯಕ ನಿರ್ದೇಶಕ ಹಾಗೂ ಚುನಾವಣಾಧಿಕಾರಿ ಕೆ.ವಿ. ಯೋಗಾನಂದ ಘೋಷಿಸಿದ್ದಾರೆ.

ಈ ವೇಳೆ ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಕುಞ್ಞಂಗಡ ಅರುಣ್ ಭೀಮಯ್ಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಮಾಚಿಮಂಡ ವಸಂತ್, ಬಿಜೆಪಿ ಕಾರ್ಯದರ್ಶಿ ಗುಮ್ಮಟಿರ ಕಿಲನ್ ಗಣಪತಿ ಹಾಗೂ ಅಧಿಕಾರಿ ಹಂಪಣ್ಣನವರು ಮೊದಲಾದವರು ಪಾಲ್ಗೊಂಡು ಶುಭ ಕೋರಿದರು.