ಸೋಮವಾರಪೇಟೆ, ಮೇ. 16: ಶಾಸಕರ ಅನುದಾನದಡಿ ಕೈಗೊಳ್ಳ ಲಾಗುತ್ತಿರುವ ಪಟ್ಟಣದಿಂದ ಸೀಗಲುಡುವೆ-ಕುಸುಬೂರು-ಬೇಳೂರುಬಾಣೆ ಸಂಪರ್ಕ ರಸ್ತೆಯ ಅಗಲೀಕರಣ ಕಾಮಗಾರಿಗೆ ಬೇಳೂರು ಬಾಣೆಯಲ್ಲಿ ಚಾಲನೆ ನೀಡಲಾಯಿತು.ಈ ಸಂದರ್ಭ ಬೇಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ. ಮಧು ಮಾತನಾಡಿ, ಈಗಾಗಲೇ ಸಿಎಂಜಿಎಸ್ ಯೋಜನೆಯಡಿಯಲ್ಲಿ ಸೋಮವಾರಪೇಟೆ-ಬೇಳೂರು ಬಸವನಳ್ಳಿ-ಗುಡುಗೂರು ಮಾರ್ಗವಾಗಿ ಕಾರೆಕೊಪ್ಪದ ಮೂಲಕ ಕುಶಾಲನಗರ ರಸ್ತೆಯನ್ನು ಸಂಪರ್ಕಿ ಸುವ 6 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ ವಾಗಬೇಕಾಗಿದೆ ಎಂದರು. ಲೋಕೋಪಯೋಗಿ ಇಲಾಖೆಯ ಮೂಲಕ ವಿಶೇಷ ಅನುದಾನದಡಿ ಯಲ್ಲಿ ಬೇಳೂರು ಬಾಣೆ-ಕೆಂಚಮ್ಮನ ಬಾಣೆ ಮಾರ್ಗವಾಗಿ ಬೇಳೂರು ಎಸ್ಟೇಟ್ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೂ ಶೀಘ್ರದಲ್ಲೇ ಚಾಲನೆ ದೊರೆಯಲಿದೆ ಎಂದರು.

ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಸಮಿತಿ ಕಾರ್ಯದರ್ಶಿ ಪೂಣಚ್ಚ ಮಾತನಾಡಿ, ಗ್ರಾಮಾಭಿವೃದ್ಧಿಯ ವಿಚಾರ ಬಂದಾಗ ಸರ್ವರೂ ಸಹಕಾರ ನೀಡಬೇಕಾಗಿರು ವದು ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡಿದ್ದು, ಇದಕ್ಕೆ ಪೂರಕವಾಗಿ ಸೆಸ್ಕಾಂನವರು ವಿದ್ಯುತ್ ಕಂಬಗಳನ್ನು ರಸ್ತೆ ಬದಿಗೆ ಸರಿಸುವ ಕಾರ್ಯ ಹಾಗೂ ಅರಣ್ಯ ಇಲಾಖೆ ಮರಗಳ ತೆರವಿನ ಕಾರ್ಯ ಮಾಡುವ ಮೂಲಕ ಸಹಕಾರ ನೀಡಬೇಕಾಗಿದೆ ಎಂದರು.

ಬೇಳೂರು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್, ಮಾಜಿ ಅಧ್ಯಕ್ಷ ಬಿ.ಎನ್. ಬಸವರಾಜು, ಚಿಕ್ಕಣ್ಣ ಎಸ್ಟೇಟ್‍ನ ವ್ಯವಸ್ಥಾಪಕರಾದ ಬೆಂಜಮಿನ್ ಫರ್ನಾಂಡೀಸ್, ಗ್ರಾಮದ ಪ್ರಮುಖರು ಗಳಾದ ಗೋವಿನಮನೆ ಸುಬ್ಬಯ್ಯ, ಗಣೇಶ್, ಡಿ.ಜೆ. ವಿಜಯಕುಮರ್, ಕೆಂಚಮ್ಮನಬಾಣೆ ಬಿ.ಸಿ. ವಸಂತ ಪೂಜಾರಿ, ಕುಮಾರ, ಸುನಿಲ್ ಸೇರಿ ದಂತೆ ಪ್ರಮುಖರುಗಳು ಹಾಜರಿದ್ದರು.