ಗೋಣಿಕೊಪ್ಪಲು, ಮೇ 16: ತಿತಿಮತಿ ಸಮೀಪದ ಕಲ್ತೋಡು ಗಿರಿಜನ ಕಾಲೋನಿಗೆ ಅಂಬೇಡ್ಕರ್ ಯೋಜನೆಯಡಿ ವಸತಿ ನಿರ್ಮಾಣ ಕಾಮಾಗಾರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಭೂಮಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ನಿರ್ಗತಿಕರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅಂಬೇಡ್ಕರ್ ವಸತಿ ಯೋಜನೆಯ ಮೂಲಕ ವಸತಿ ನಿರ್ಮಾಣ ಯೋಜನೆ ರೂಪಿಸಿದೆ ಇದನ್ನು ಗ್ರಾಮ ಪಂಚಾಯಿತಿ ಅರ್ಹ ಪಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.ಗ್ರಾ.ಪಂ, ಅಧ್ಯಕ್ಷ ಶಿವಕುಮಾರ್ ಮಾತನಾಡಿ, ತಿತಿಮತಿ ವ್ಯಾಪ್ತಿಯಲ್ಲಿ ಈಗಾಗಲೇ ಒಟ್ಟು 73 ಮನೆಗಳ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದು. ಕಲ್ತೋಡು ಗಿರಿಜನ ಹಾಡಿಯಲ್ಲಿ 8 ಮನೆಗಳು ನಿರ್ಮಾಣವಾಗಲಿದೆ. 1.62 ಲಕ್ಷ ವೆಚ್ಚದಲ್ಲಿ ಒಂದು ಮನೆ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಕಾಲೋನಿಯ ನಿವಾಸಿಗಳಿಗೆ ಅಧಾರ್ ಹಾಗೂ ಗುರುತಿನ ಚೀಟಿಯನ್ನು ನೀಡಿದ್ದೇವೆ ಎಂದು ಜಿ.ಪಂ. ಸದಸ್ಯೆ ಪಿ.ಆರ್ ಪಂಕಜ ಹೇಳಿದರು.

ಭೂಮಿ ಪೂಜೆ ಸಂದರ್ಭ ತಾ.ಪಂ ಸದಸ್ಯೆ ಆಶಾ ಜೇಮ್ಸ್, ಗ್ರಾ.ಪಂ ಸದಸ್ಯರಾದ ಅನೂಪ್, ಪೊನ್ನು, ಶ್ರೀನಿವಾಸ್, ಚುಬ್ರು, ಪಿಡಿಓ ಲೋಕನಾಥ್, ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್ ಇದ್ದರು.