ಮಡಿಕೇರಿ, ಮೇ 4: ಸುಂಟಿಕೊಪ್ಪದ ಮಹಮ್ಮದಾಲಿ ಶಿಹಾಬ್ ತಂಙಳ್ ಜೂನಿಯರ್ ಶರೀಯತ್ ಕಾಲೇಜಿನ 2017-18ನೇ ಸಾಲಿನ ಉಚಿತ ಪ್ರವೇಶಾತಿ ಆರಂಭವಾಗಿದೆ. ತಾ. 9 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಸಿ.ಎಂ.ಹಮೀದ್ ಮೌಲವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಬಡ, ಅನಾಥ, ಪ್ರತಿಭಾವಂತ ಮಕ್ಕಳಿಗೆ ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶಿಕ್ಷಣ ನೀಡುವ ಸಂಸ್ಥೆ ಇದಾಗಿದ್ದು, ಈ ಬಾರಿ 35 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದ್ದು, ಕೊಡಗಿನ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಅಂತಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ವನ್ನು ಹೊಂದಿದೆ. ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಯಿಂದ ಬಿ.ಎ, ಎಂ.ಎ ತನಕ 7 ವರ್ಷಗಳ ಕಾಲ ಉಚಿತವಾಗಿ ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನೂ ನೀಡಿ, ಕೇರಳದ ಜಾಮಿಅ ನೂರಿಯಾದಿಂದ ‘ಫೈಜಿ’ ಬಿರುದನ್ನು ನೀಡಲಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ, ವ್ಯಕ್ತಿಗತ ಶಿಕ್ಷಣ ಬಹುಭಾಷಾ ತರಬೇತಿ, ಬರಹ ಹಾಗೂ ಭಾಷಣವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತದೆ. ಅಲ್ಲದೆ ದೇಶಕ್ಕೆ ಕಂಟಕವಾಗಿರುವ ಭಯೋತ್ಪಾದನೆ ವಿರುದ್ಧ ವಿದ್ಯಾರ್ಥಿಗಳಿಗೆ ತಿಳಿಹೇಳುವ ಕೆಲಸವನ್ನೂ ಮಾಡಲಾಗುತ್ತದೆ ಎಂದು ಸಿ.ಎಂ.ಹಮೀದ್ ಮೌಲವಿ ತಿಳಿಸಿದರು.

ಮಕ್ಕಳಿಂದ ಯಾವದೇ ರೀತಿಯ ಶುಲ್ಕವನ್ನು ಪಡೆಯದೆ ಆಹಾರ, ವಸತಿ, ವೈದ್ಯಕೀಯ, ಪಠ್ಯೋಪಕರಣ ಸೇರಿದಂತೆ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಮೇ 9ರಂದು ಪೂರ್ವಾಹ್ನ 10.30ಗಂಟೆಗೆ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ಹೆಚ್ಚಿನ ಮಾಹಿತಿಗೆ 9449267177 ಹಾಗೂ 9731174458ನ್ನು ಸಂಪರ್ಕಿಸಬಹು ದಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಉಮ್ಮರ್ ಫೈಝಿ, ಸದಸ್ಯರಾದ ಇಕ್ಬಾಲ್ ಮೌಲವಿ, ನಾಸಿರ್ ಮೌಲವಿ, ಹಾರೂನ್ ಹಾಗೂ ಶಿಕ್ಷಕ ಜಬ್ಬಾರ್ ಮೌಲವಿ ಉಪಸ್ಥಿತರಿದ್ದರು.