ಗೋಣಿಕೊಪ್ಪಲು/ಸಿದ್ದಾಪುರ, ಮೇ 5: ಇಂದು ಸಿದ್ದಾಪುರ-ನೆಲ್ಯಹುದಿಕೇರಿ ಅವಳಿ ಪಟ್ಟಣಗಳು ಎಂದಿನಂತಿರಲಿಲ್ಲ. ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂಪ್ರೇರಿತರಾಗಿ ಮುಚ್ಚಿದ್ದರಿಂದಾಗಿ ‘ಅಘೋಷಿತ ಬಂದ್’ ಅಲ್ಲಿ ಕಂಡು ಬಂತು. ಜಿಲ್ಲೆಯಾದ್ಯಂತ ಮುನ್ನಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ಬಂದ್ ಹಿನ್ನೆಲೆ ಎಲ್ಲಿಯೂ ಅಹಿತಕರ ಘಟನೆ ನಡೆಯದೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಯೋಜಿಸಿದ್ದ ಮೂರು ಗಂಟೆ ಅವಧಿಯ ಶೋಭಾಯಾತ್ರೆ ಶಾಂತಿಯುತ ಮುಕ್ತಾಯ ಕಂಡಿತು. ಶೋಭಾಯಾತ್ರೆಯ ಮುಂದೆ-ಹಿಂದೆ ಎಲ್ಲವೂ ಪೆÇಲೀಸರ ಸರ್ಪಗಾವಲಿನಿಂದಾಗಿ ಬಂದೋಬಸ್ತ್ ಮತ್ತೊಂದು ಮೆರವಣಿಗೆಯಂತೆ ಕಂಡು ಬಂತು. ರಸ್ತೆ ಉದ್ದಗಲವೂ ಕೇಸರಿಮಯವಾಗಿತ್ತು. ಎಲ್ಲೆಲ್ಲೂ ಭಗವಧ್ವಜದ ಹಾರಾಟ. ಯುವಕ ಯುವತಿಯರ ದೇಶಪ್ರೇಮದ ಘೋಷಣೆಗಳ ಜತೆಗೆ ಚಾಮರಾಜನಗರ ಜಿಲ್ಲೆಯ ಡೊಳ್ಳು ಕುಣಿತ ತಂಡದ ತಮಟೆ ನಗಾರಿ, ಗೊರವ ಕುಣಿತ, ಮಾಲ್ದಾರೆ ಯುವಕ ಯುವತಿಯರ ಚಂಡೆ ಮೇಳ ಹಾಗೂ ಕೊಡಗಿನ ವಾಲಗ ಶೋಭಾಯಾತ್ರೆಗೆ ಮೆರುಗು ನೀಡಿತ್ತು. ಒಟ್ಟಿನಲ್ಲಿ ಭಾವಾವೇಶ, ಉದ್ಘೋಷದ ಶೋಭಾಯಾತ್ರೆಯಲ್ಲಿ ಸಾವಿರಾರು ಪುರುಷ - ಮಹಿಳೆಯರು ಪಾಲ್ಗೊಂಡು ಯಶಸ್ಸಿಗೆ ಸಾಕ್ಷಿಯಾದರು.
ಇಂದು ನಡೆಯಲಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಹಲವು ದಿನಗಳಿಂದಲೇ ಪೂರ್ವಭಾವಿ ಸಿದ್ಧತೆ ನಡೆದಿತ್ತು, ಸಿದ್ದಾಪುರ ಬಸ್ ನಿಲ್ದಾಣ ಹಾಗೂ ಸಮಾಜೋತ್ಸವ ಆಯೋಜನೆಗೊಂಡಿದ್ದ ಹಳೆಗದ್ದೆ ಮಾದಪ್ಪ ಅವರ ಗದ್ದೆ ಕೇಸರಿ ಚಿತ್ತಾರದಿಂದ ಅಲಂಕರಿಸಲಾಗಿತ್ತು. ಶೋಭಾಯಾತ್ರೆ ಸಾಗುವ ರಸ್ತೆಯ ಇಕ್ಕೆಲದಲ್ಲಿಯೂ ಕೇಸರಿ ಮಾಲೆಯ ಸಿಂಗಾರವಿತ್ತು. ಇಂದು ಬೆಳಿಗ್ಗೆಯಿಂದಲೇ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಉತ್ಸಾಹದಿಂದ ಓಡಾಟ ನಡೆಸುವದು ಕಂಡು ಬಂತು. ದ್ವಿಚಕ್ರ ವಾಹನ, ಚತುಷ್ಚಕ್ರ ವಾಹನದಲ್ಲಿ ಭಗವಧ್ವಜ ಹಾರಾಟ, ಸಂಪೂರ್ಣ ಕೇಸರಿ ವಸ್ತ್ರಧಾರಿಯಾದ ಒಂದಿಷ್ಟು ಮಹಿಳೆಯರು, ಪುರುಷರು ಶೋಭಾಯಾತ್ರೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಸುಮಾರು 3 ಕಿ.ಮೀ.ಗೂ ದೂರದ ಶೋಭಾಯಾತ್ರೆ ಬೆಳಿಗ್ಗೆ 11 ಗಂಟೆಗೆ ಪ್ರಾರಂಭಗೊಂಡಿತು. ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ
ಶ್ರೀ ಬೋಧÀ ಸ್ವರೂಪಾನಂದ ಮಹಾರಾಜ್ ಗೋಪೂಜೆಯೊಂದಿಗೆ ಕೇಸರಿ ಬಾವುಟ ಬೀಸುವ ಮೂಲಕ ಅಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮುಂಭಾಗ ಉದ್ಘಾಟನೆ ನೆರವೇರಿಸಿದರು.
ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ನಾಪೆÇೀಕ್ಲು, ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪಲು, ಶ್ರೀಮಂಗಲ,
(ಮೊದಲ ಪುಟದಿಂದ) ಪೆÇನ್ನಂಪೇಟೆ, ಕುಟ್ಟ, ಕಾನೂರು, ಸುಂಟಿಕೊಪ್ಪ, ಚೆಟ್ಟಳ್ಳಿ ಒಳಗೊಂಡಂತೆ ಸಿದ್ದಾಪುರ, ಮಾಲ್ದಾರೆÉ, ನೆಲ್ಯಹುದಿಕೇರಿ, ಅಭ್ಯತ್‍ಮಂಗಲದ ಕಾರ್ಯಕರ್ತರೂ ಅಲ್ಲಿ ಕಂಡು ಬಂದರು.
ಜಿಲ್ಲೆಯ ನಾಪೆÇೀಕ್ಲುವಿನಲ್ಲಿ ಜರುಗುತ್ತಿರುವ ಬಿದ್ದಾಟಂಡ ಕಪ್ ಹಾಕಿ, ಬಾಳೆಲೆಯಲ್ಲಿ ನಡೆಯುತ್ತಿರುವ ಅಳಮೇಂಗಡ ಕಪ್ ಕ್ರಿಕೆಟ್, ವಿವಿಧೆಡೆ ನಡೆಯುತ್ತಿರುವ ಕ್ರೀಡಾ ಕೂಟ, ಗ್ರಾಮ ದೇವತೆಯ ಪೂಜೆ, ಕಾರಣ ಕೊಡ್‍ಪೆÇೀ ಕಾರ್ಯಕ್ರಮದ ಹಿನ್ನೆಲೆ ನಿರೀಕ್ಷಿತ ಜನ ಸಮೂಹ ಕುಂಠಿತಗೊಂಡಿದ್ದರೂ, ಸಾವಿರಾರು ವಿಎಚ್‍ಪಿ -ಬಜರಂಗದಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ, ಕುಣಿಯುತ್ತಾ ಸಂಭ್ರಮಿಸುವದಕ್ಕೆ ಕೊರತೆ ಇರಲಿಲ್ಲ.
ಶೋಭಾಯಾತ್ರೆಯ ಉದ್ದಗಲಕ್ಕೂ ಶ್ರೀ ರಾಮ ಜನ್ಮ ಭೂಮಿ ಕೀ ಜೈ, ಶ್ರೀ ಕೃಷ್ಣ ಜನ್ಮಭೂಮಿಕೀ ಜೈ, ಕಾಶೀ ವಿಶ್ವನಾಥ್ ಕೀ ಜೈ, ಸನಾತನ ಹಿಂದೂ ಧರ್ಮಕಿ ಜೈ, ಭಾರತ್ ಅಖಂಡ ಹೋ, ಹರ ಹರ ಮಹಾದೇವ್ ಮುಂತಾದ ಘೋಷಣೆಗಳು ತಾರಕಕ್ಕೇರಿದ್ದವು.
ಈ ನಡುವೆ ವಿವಿಧ ಯುವಕ ಸಂಘಗಳ ಪ್ರಮುಖರು ಗರ್ವದಿಂದ ಘರ್ಜಿಸು ನಾನೊಬ್ಬ ಹಿಂದೂ, ಕಟ್ಟುವೆವು ಕಟ್ಟುವೆವು ರಾಮಮಂದಿರ ಕಟ್ಟುವೆವು, ಮುಂತಾದ ಘೋಷಣೆಗಳೊಂದಿಗೆ ಕಿವಿಗಡಚಿಕ್ಕುವ ಪಟಾಕಿ ಸದ್ದು ಅಲ್ಲಲ್ಲಿ ಕೇಳಿ ಬಂತು.
ಮೆರವಣಿಗೆಯಲ್ಲಿ ಭಜರಂಗದಳ ಜಿಲ್ಲಾ ಸಹಸಂಚಾಲಕ ಕೆ.ಎಚ್. ಚೇತನ್, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಜಿ.ಪಂ. ಅಧ್ಯಕ್ಷ ರವಿಕುಶಾಲಪ್ಪ, ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಕಾರ್ಯಕಾರಿಣಿ ಸದಸ್ಯೆ ರೀನಾ ಪ್ರಕಾಶ್, ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್, ವೀರಾಜಪೇಟೆ ಬಿಜೆಪಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅರುಣ್ ಭೀಮಯ್ಯ, ಭಾಜಾಪಾ ಪ್ರಮುಖರಾದ ಕಾಂತಿ ಬೆಳ್ಯಪ್ಪ, ಅಜಿತ್ ಕರುಂಬಯ್ಯ, ಗೋಣಿಕೊಪ್ಪಲು ಎಪಿಎಂಸಿ ಅಧ್ಯಕ್ಷ ಸುವಿನ್‍ಗಣಪತಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಬೆಳ್ಳಿಯಪ್ಪ, ಕಿಲನ್‍ಗಣಪತಿ, ಪಟ್ರಪಂಡ ರಘು ನಾಣಯ್ಯ, ಜಪ್ಪು ಅಚ್ಚಪ್ಪ, ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಸಿ. ಸತೀಶ್, ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಜಿ.ಪಂ. ಸದಸ್ಯ ಮುರುಳಿ ಕರುಂಬಮ್ಮಯ್ಯ, ಸುರೇಶ್ ಮುತ್ತಪ್ಪ, ರವಿ ಬಸಪ್ಪ, ಆರ್‍ಎಸ್‍ಎಸ್ ಜಿಲ್ಲಾ ಕಾರ್ಯವಾಹ ದಿನೇಶ್ ಕುಮಾರ್, ಕುಶಾಲನಗರ ತಾಲೂಕು ಸಂಘಚಾಲಕ ಮಹೇಶ್ ಜೈನಿ, ಬಿ.ಕೆ. ಜಗದೀಶ್, ಕಾನೂರು ಭರತ್, ಹೊಸೂರು ಗೋಪಿ ಚಿಣ್ಣಪ್ಪ ಮುಂತಾದವರು ಇದ್ದರು. ಪೆÇಲೀಸ್ ವ್ಯಾಪಕ ಬಂದೋಬಸ್ತ್ ಅನ್ನು ಕೊಡಗು ಪೆÇಲೀಸ್ ಅಧೀಕ್ಷಕ ರಾಜೇಂದ್ರಪ್ರಸಾದ್ ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು. ವಜ್ರ ವಾಹನ, ಅಗ್ನಿಶಾಮಕ ದಳ, ಜಿಲ್ಲಾ ಸಶಸ್ತ್ರ ಪಡೆ ತುಕಡಿಗಳು ಎಲ್ಲೆಡೆ ಕಂಡು ಬಂದಿದ್ದು, ಕೊಡಗು ಜಿಲ್ಲೆಯ ಹೆಚ್ಚಿನ ಪೆÇಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಮಹಿಳಾ ಪೆÇಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಹುತಾತ್ಮ ದೇವಪ್ಪಂಡ ಕುಟ್ಟಪ್ಪ ವೇದಿಕೆಯಲ್ಲಿ ಮೆರವಣಿಗೆ ಅಂತ್ಯಗೊಂಡಿತು.
ಚಿತ್ರ - ವರದಿ: ಟಿ.ಎಲ್. ಶ್ರೀನಿವಾಸ್ / ವಾಸು / ಅಂಚೆಮನೆ ಸುಧಿ