ನಾಪೆÇೀಕ್ಲು, ಮೇ. 5: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಬಿದ್ದಾಟಂಡ ಕಪ್ ಹಾಕಿ ನಮ್ಮೆಯಲ್ಲಿ ಮಾಜಿ ಚಾಂಪಿಯನ್ ಕಲಿಯಂಡ ತಂಡ ತ್ರಾಸದಾಯಕ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದೆ.
ಇಂದು ನಡೆದ ಪಂದ್ಯದಲ್ಲಿ ಚೋಯಮಾಡಂಡ ತಂಡವು 4-0 ಗೋಲಿನ ಅಂತರದಿಂದ ಬೊವ್ವೇರಿಯಂಡ ತಂಡವನ್ನು ಪರಾಭವ ಗೊಳಿಸಿತು. ಚೋಯಮಾಡಂಡ ತಂಡದ ಪರ ಮನು ಮಂದಣ್ಣ, ಚಂಗಪ್ಪ, ಸನ್ನು, ಬಿಫಿನ್ ತಲಾ ಒಂದೊಂದು ಗೋಲು ದಾಖಲಿಸಿದರು. ಚೆಕ್ಕೇರ ತಂಡವು ಮೂಕೊಂಡ ತಂಡವನ್ನು 3-1 ಗೋಲಿನ ಅಂತರದಿಂದ ಸೋಲಿಸಿತು. ಮೂಕೊಂಡ ಜನಪೊಕ್ ಒಂದು ಗೋಲು ದಾಖಲಿಸಿದರೆ, ಚೆಕ್ಕೇರ ತಂಡದ ಪರ ಸ್ಯಾನ್, ದೇವ್ ಬೆಳ್ಳಿಯಪ್ಪ, ಪೂವಯ್ಯ ತಲಾ ಒಂದೊಂದು ಗೋಲು ದಾಖಲಿಸಿದರು. ಸಣ್ಣುವಂಡ ತಂಡವು ಚಂದೂರ ತಂಡವನ್ನು ಟೈ ಬ್ರೇಕರ್ ಮೂಲಕ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಮೊದಲು ನಡೆದ ಪಂದ್ಯದಲ್ಲಿ ಚಂದೂರ ಪೊನ್ನಣ್ಣ ಮತ್ತು ಸಣ್ಣುವಂಡ ಪೊನ್ನಣ್ಣ ದಾಖಲಿಸಿದ ಒಂದೊಂದು ಗೋಲಿನಿಂದ ಪಂದ್ಯ ಡ್ರಾ ಗೊಂಡಿತ್ತು. ಕರಿನೆರವಂಡ ತಂಡವು ಪೆಮ್ಮಂಡ ತಂಡವನ್ನು 3-1 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಪೆಮ್ಮಂಡ ತಂಡದ ಪರ ಚರಣ್ ಒಂದು ಗೋಲು ದಾಖಲಿಸಿದರೆ, ಕರಿನೆರವಂಡ ತಂಡದ ಪರ ರತನ್ ಕುಂಞಪ್ಪ ಎರಡು ಮತ್ತು ಲಿತೇಶ್ ಬಿದ್ದಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಮಡೇಪಂಡ ತಂಡವು 2-0 ಗೋಲಿನ ಅಂತರದಿಂದ ಅಮ್ಮಂಡ ತಂಡವನ್ನು ಸೋಲಿಸಿತು.
ಮಂಡೇಪಂಡ ತಂಡದ ಪರ ಸಜನ್ ಅಚ್ಚಯ್ಯ, ದಿಲನ್ ತಲಾ ಒಂದೊಂದು ಗೋಲು ದಾಖಲಿಸಿ ದರು. ಪುದಿಯೊಕ್ಕಡ ತಂಡವು 2-1 ಗೋಲಿನ ಅಂತರದಿಂದ ಕೋಟೆರ ತಂಡವನ್ನು ಪರಾಭವಗೊಳಿಸಿತು. ಕೋಟೆರ ತಂಡದ ಪರ ಕವನ್ ಒಂದು ಗೋಲು ದಾಖಲಿಸಿದರೆ, ಪುದಿಯೊಕ್ಕಡ ತಂಡದ ಪರ ವಿಫನ್ ಸೋಮಯ್ಯ, ಬೋಪಣ್ಣ ತಲಾ ಒಂದೊಂದು ಗೋಲು ದಾಖಲಿಸಿದರು. ಚೇನಂಡ ತಂಡವು ಟೈ ಬ್ರೇಕರ್ನಲ್ಲಿ ಮೇವಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮುಳ್ಳಂಡ ತಂಡವು ಟೈ ಬ್ರೇಕರ್ನಲ್ಲಿ ಬಾದುಮಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮುಳ್ಳಂಡ ಅಜೇಯ್ ಮತ್ತು ಬಾದುಮಂಡ ಗಪ್ಪು ಗಣಪತಿ ದಾಖಲಿಸಿದ ಒಂದೊಂದು ಗೋಲಿನಿಂದ ಪಂದ್ಯ ಡ್ರಾ ಗೊಂಡಿತ್ತು. ಕಲಿಯಂಡ ತಂಡವು ಟೈ ಬ್ರೇಕರ್ನಲ್ಲಿ ಕೊಕ್ಕಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.
-ಪಿ.ವಿ.ಪ್ರಭಾಕರ್